March 18, 2026

ವಿಟ್ಲ: ‘ಡಿ ಗ್ರೂಪ್(ರಿ) ವಿಟ್ಲ ಸಂಸ್ಥೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

0
image_editor_output_image822894952-1761914150935

ವಿಟ್ಲ: ಡಿ ಗ್ರೂಪ್ (ರಿ) ವಿಟ್ಲ ಸಂಸ್ಥೆಗೆ 2025ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರಕಿದೆ. ಈ ಸಂಸ್ಥೆಯ ಸಮಾಜ ಸೇವೆಯನ್ನು ಗುರುತಿಸಿ ಪ್ರಶಸ್ತಿ ಲಭಿಸಿದೆ.

ಕಳೆದ ೧೫ ವರ್ಷಗಳಿಂದ ಡಿ ಗ್ರೂಪ್(ರಿ) ವಿಟ್ಲ ಈ ಸಂಸ್ಥೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುತ್ತದೆ. ವಿಟ್ಲ ಸುತ್ತಮುತ್ತಲಿನಲ್ಲಿ ಬಡವರ, ನಿರ್ಗತಿಕರ ಸೇವೆ ಮಾಡುತ್ತ ಬಂದಿರುತ್ತದೆ. ಸಂಸ್ಥೆಯ ನೇತೃತ್ವದಲ್ಲಿ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆಂಬ್ಯುಲೆನ್ಸ್ ಹೊಂದಿದ್ದು, ದಿನದ ೨೪ ಗಂಟೆಯೂ ಯಾವುದೇ ಫಲಾಪೇಕ್ಷೆ ಇಲ್ಲದೇ ಸೇವೆ ಸಲ್ಲಿಸುತ್ತಿದೆ. ಅನಾರೋಗ್ಯ ಪೀಡಿತರು ಕರೆ ಮಾಡಿದಾಗ ತಕ್ಷಣವೇ ಅವರನ್ನು ಕರ್ನಾಟಕ ಮತ್ತು ಕೇರಳ ರಾಜ್ಯದ ಯಾವುದೇ ಆಸ್ಪತ್ರೆಗೆ ಯಾವುದೇ ಶುಲ್ಕು ಪಡೆಯದೇ ಆಸ್ಪತ್ರೆಗೆ ದಾಖಲಿಸುವ ಕಾರ್ಯವನ್ನು ಮಾಡುತ್ತಿದೆ.

ಅದಲ್ಲದೇ ಅನಾರೋಗ್ಯ ಪೀಡಿತರು ಆಸ್ಪತ್ರೆ ದಾಖಲಾಗಿ, ಆಸ್ಪತ್ರೆ ಬಿಲ್ ನೀಡಲು ಕಷ್ಟಪಟ್ಟಾಗ ನಮ್ಮ ಸಂಸ್ಥೆಯ ಸದಸ್ಯರು ತಕ್ಷಣವೇ ಅದನ್ನು ಭರಿಸಿ ಬಡವರ ಕಷ್ಟಗಳಿಗೆ ಸ್ಪಂದಿಸಿದ ಹಲವಾರು ನಿದರ್ಶನಗಳಿವೆ. ಇದೀಗ ೧೦೦೦ಕ್ಕಿಂತಲೂ ಅಧಿಕ ಸೇವೆಗಳನ್ನು ನಮ್ಮ ಆಂಬ್ಯುಲೆನ್ಸ್ ಮೂಲಕ ಮಾಡಿರುತ್ತದೆ. ಇನ್ನಷ್ಟು ಸೇವೆ ನೀಡುವ ಉದ್ದೇಶದಿಂದ ದೊಡ್ಡ ಗಾತ್ರದ ಆಂಬ್ಯುಲೆನ್ಸ್ ಖರೀದಿಸಲು ಮುಂದಾಗಿರುತ್ತೇವೆ.

ಬಡ ಹೆಣ್ಮುಕ್ಕಳ ಮದುವೆಗೆ ಸಹಾಯಧನ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಪ್ರತಿ ವರ್ಷವೂ ರಕ್ತದಾನ ಶಿಬಿರ, ಮುಂಜಿ ಕಾರ್ಯಕ್ರಮ, ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದು, ಸ್ವದೇಶಿ ಮತ್ತು ವಿದೇಶದಲ್ಲಿಯೂ ಅಪಾರ ಅಭಿಮಾನಿಗಳ, ದಾನಿಗಳ ಬಳಗ ಹೊಂದಿರುತ್ತದೆ. ಕೇವಲ ಆರೋಗ್ಯ, ಸಾಮಾಜಿಕ, ಶೈಕ್ಷಣಿಕ ಸೇವೆಯಲ್ಲದೇ ಕ್ರೀಡಾ ಕ್ಷೇತ್ರಕ್ಕೂ ಸಂಸ್ಥೆ ವತಿಯಿಂದ ನೆರವು ನೀಡಲಾಗುತ್ತಿದೆ. ನಿರಂತರವಾಗಿ ಸಮಾಜಮುಖಿ ಸೇವೆಗಳನ್ನು ನೀಡುತ್ತ ಬಂದಿರುತ್ತದೆ.

Leave a Reply

Your email address will not be published. Required fields are marked *

You may have missed

error: Content is protected !!