ಅಪ್ರಾಪ್ತ ಮಗಳನ್ನೇ ಗುಂಡಿಕ್ಕಿ ಹತ್ಯೆಗೈದ ತಂದೆ
ಮಧ್ಯಪ್ರದೇಶ: ಅಪ್ರಾಪ್ತ ಮಗಳನ್ನೇ ಕುಟುಂಬದವರು ಗುಂಡಿಕ್ಕಿ ಹತ್ಯೆ ಮಾಡಿ ಬಳಿಕ ಶವವನ್ನು ತಂದೆ ನದಿಗೆ ಎಸೆದಿರುವ ಘಟನೆ ಮಧ್ಯಪ್ರದೇಶದ ಮೊರನಾದಲ್ಲಿ ನಡೆದಿದೆ.
17 ವರ್ಷದ ಬಾಲಕಿಯ ಕೊಲೆಯ ನಂತರ, ಆಕೆಯ ಶವವನ್ನು 21ಕಿ.ಮೀ ದೂರದಲ್ಲಿರುವ ಆಕೆಯ ಪೂರ್ವಜರ ಗ್ರಾಮದ ಬಳಿಯ ಕ್ವಾರಿ ನದಿಗೆ ಎಸದಿದ್ದಾರೆ. ಪ್ರೇಮ ಸಂಬಂಧದಿಂದಾಗಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಈ ಘಟನೆ ನಾಲ್ಕು ದಿನಗಳ ಹಿಂದೆ ನಡೆದಿತ್ತು. ಆದರೆ ಶನಿವಾರ ಮಾಹಿತಿ ಪಡೆದ ನಂತರ, ವಿವಿಧ ಪೊಲೀಸ್ ತಂಡಗಳು ತನಿಖೆ ಆರಂಭಿಸಿದ್ದರು. ಶನಿವಾರ ಮಧ್ಯಾಹ್ನದಿಂದ ಪೊಲೀಸ್ ತಂಡಗಳು ಶವಕ್ಕಾಗಿ ಹುಡುಕಾಟ ನಡೆಸುತ್ತಿದ್ದರು.
SDRF ತಂಡ ಭಾನುವಾರ ಬೆಳಿಗ್ಗೆ 11 ಗಂಟೆಗೆ ಬಿಳಿ ಹಾಳೆಯಲ್ಲಿ ಸುತ್ತಿಡಲಾಗಿದ್ದ ಶವವನ್ನು ನದಿಯಿಂದ ಹೊರತೆಗೆದರು. ನಂತರ ತಂದೆ ಮತ್ತು ಇತರ ಸಂಬಂಧಿಕರು ಶವವನ್ನು ಗುರುತಿಸಿದರು. ಸರಿಸುಮಾರು ಐದು ದಿನಗಳ ಕಾಲ ನೀರಿನಲ್ಲಿ ಮುಳುಗಿದ್ದ ನಂತರ ಶವವು ಗಮನಾರ್ಹವಾಗಿ ಕೊಳೆತಿತ್ತು. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.




