ವಿಟ್ಲ: ಕೋರೆಯ ನೀರಿಗೆ ಬಿದ್ದು ಬಾಲಕ ಮೃತ್ಯು
ವಿಟ್ಲ: ಕುಳ ಗ್ರಾಮದ ಕಲ್ಲಂದಡ್ಕದಲ್ಲಿನ ಮುಚ್ಚಿದ ಕೋರೆಯಲ್ಲಿದ್ದ ನೀರಿಗೆ ಬಿದ್ದು ವಿದ್ಯಾರ್ಥಿಯೊಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಮೃತರನ್ನು ಕಬಕ ನಿವಾಸಿ ಹಸೈನ್ ಅವರ ಪುತ್ರ ಮೊಹಮ್ಮದ್ ಆಜ್ಮನ್ (15) ಎಂದು ಗುರುತಿಸಲಾಗಿದೆ. ಆಜ್ಮನ್ ಪುತ್ತೂರಿನ ಸಾಲ್ಮರ ಪ್ರೌಡ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದನು.
ಘಟನೆಯ ವೇಳೆ ಮುಹಮ್ಮದ್ ಆಜ್ಮನ್ ತನ್ನ ಸ್ನೇಹಿತರೊಂದಿಗೆ ಕೋರೆಯ ಬಳಿಗೆ ತೆರಳಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ತಕ್ಷಣ ಸ್ಥಳೀಯರು ನೆರವಿಗೆ ಧಾವಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




