March 6, 2026

ಉಚ್ಚಿಲ ಪೊಲ್ಯ ರಸ್ತೆಯ ಮೈದಾನದಲ್ಲಿ ಎಂಡಿಎಂಎ ಮಾರಾಟ: ಇಬ್ಬರು ಆರೋಪಿಗಳ ಬಂಧನ

0
image_editor_output_image1768321851-1758275465572.jpg

ಉಡುಪಿ: ಪಡುಬಿದ್ರಿ ಸಮೀಪದ ಬಡಾ ಗ್ರಾಮ ಉಚ್ಚಿಲ ಪೊಲ್ಯ ರಸ್ತೆಯ ಮೈದಾನದಲ್ಲಿ ಮಾದಕ ದ್ರವ್ಯ ಎಂಡಿಎಂಎ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.

ಮಾದಕವಸ್ತು ಮಾರಾಟ ತಡೆ ಕಾಯಿದೆಯನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಲ್ಲಾರು ಗ್ರಾಮದ ಪಕೀರ್ಣಕಟ್ಟೆ ಮಸೀದಿ ಬಳಿಯ ನಿವಾಸಿ ಫರ್ಹಾನ್ (27) ಹಾಗೂ ಕಾಪು ಕೊಂಬಗುಡ್ಡೆ ನಿವಾಸಿ ಮಹಮ್ಮದ್ ಹಾಸಿಂ (21) ಬಂಧಿತರು.

ಆರೋಪಿಗಳಿಂದ ಸುಮಾರು 30 ಸಾವಿರ ರೂ. ಮೌಲ್ಯದ 9.37 ಗ್ರಾಂ ತೂಕದ ಎಂಡಿಎಂಎ ಮಾತ್ರೆ ಗಳ ಪ್ಯಾಕೆಟ್‌ಗಳು, 5 ಸಾವಿರ ರೂ. ನಗದು, ಒಂದು ಮೊಬೈಲ್ ಹಾಗೂ ಆರೋಪಿಗಳು ಬಳಸಿದ್ದ ಮೋಟಾರು ಸೈಕಲನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!