May 16, 2026

ಸುಳ್ಯದ ವ್ಯಕ್ತಿ ಆಸ್ಟ್ರೇಲಿಯಾದಲ್ಲಿ ಹೃದಯಾಘಾತದಿಂದ ಸಾವು

0
image_editor_output_image1259512523-1757917641659.jpg

ಸುಳ್ಯ: ಜಾಲ್ಲೂರಿನ ನಂಗಾರಿನ ನಿವಾಸಿ ಆಸ್ಟ್ರೇಲಿಯಾದಲ್ಲಿ ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

46 ವರ್ಷದ ಸುಧಿನ್ ಮೃತ ವ್ಯಕ್ತಿ. ಉದ್ಯೋಗದ ನಿಮಿತ್ತ ಹಲವು ವರ್ಷಗಳ ಹಿಂದೆ ಆಸ್ಟ್ರೇಲಿಯಕ್ಕೆ ಹೋಗಿ ನೆಲೆಸಿರುವ ಸುಧಿನ್, ಅಲ್ಲಿನ ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಕರ್ತವ್ಯದಲ್ಲಿದ್ದರು.

ಸೆ. 11ರಂದು ಮನೆಯಲ್ಲಿರುವಾಗ ಹೃದಯಾಘಾತಕ್ಕೆ ಒಳಗಾದ ಅವರನ್ನು ಅಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮುಂಜಾನೆ ನಿಧನರಾದರು. ಮೃತರು ತಂದೆ, ಪತ್ನಿ, ಪುತ್ರಿ, ಸಹೋದರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!