March 18, 2026

ವಿಟ್ಲ: ಶಿಶು ಅಭಿವೃದ್ದಿ ಯೋಜನಾ ಕೇಂದ್ರ ಕಛೇರಿಗೆ ತಾತ್ಕಲಿಕ ವಿಶ್ರಾಂತಿ ಕೊಠಡಿ ಕೊಡುಗೆ

0
IMG-20250804-WA0008.jpg

ವಿಟ್ಲ: ವಿಟ್ಲ ಶಿಶು ಅಭಿವೃದ್ಧಿ ಯೋಜನಾ ಕಛೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವಿಟ್ಲ ಹಾಗೂ ಜೆ.ಐ.ಎಚ್ ಸಮಾಜಸೇವಾ ಘಟಕ ಮಂಗಳೂರು ಇವರ ಕೊಡುಗೆಯ ಪ್ರಯುಕ್ತ “ಸ್ತನ್ಯಪಾನ ಸಪ್ತಾಹ ಹಾಗೂ ಮಹಿಳಾ ವಿಶ್ರಾಂತಿ ಕೊಠಡಿ”ಯ ಉದ್ಘಾಟನಾ ಸೋಮವಾರ ಕಾರ್ಯಕ್ರಮ ನೆರವೇರಿತು.

ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರು “ಮಹಿಳಾ ವಿಶ್ರಾಂತಿ ಕೊಠಡಿಯ” ಅಗತ್ಯತೆಯ ಬಗ್ಗೆ ಮತ್ತು ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಬಗ್ಗೆ ಮಾತನಾಡಿದರು.
ಸಮುದಾಯ ಆರೋಗ್ಯ ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಇಂದಿರಾ ಅವರು ಸ್ತನ್ಯಪಾನದ ಮಹತ್ವ ಹಾಗೂ ಅದರಿಂದಾಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜೆ.ಐ.ಎಚ್ ಸಮಾಜಸೇವಾ ಘಟಕದ ಮಂಗಳೂರು ಇದರ ವತಿಯಿಂದ ಕೊಡುಗೆಯಾಗಿ ಸಿಗಲು ಕಾರಣಕರ್ತರಾದ ಸಾಮಾಜಿಕ ಕಾರ್ಯಕರ್ತರಾದ ಹಸೈನಾರ್ ತಾಳೀತ್ತನೂಜಿ, ಕೊಳ್ನಾಡು ಗ್ರಾ.ಪಂ ಉಪಾಧ್ಯಕ್ಷೆ ಕೆ ಅಸ್ಮ ಹಸೈನಾರ್, ವಿಟ್ಲಪಡ್ನೂರು ಗ್ರಾ.ಪಂಚಾಯಿತಿ ಸದಸ್ಯ ಸಂದೇಶ್ ಶೆಟ್ಟಿ ಬಿಕ್ನಾಜೆ, ಕೃಷಿಕ ಸೋಮಶೇಖರ ಗೌಡ ತಾಳಿತ್ತನೂಜಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮುಮ್ತಾಝ್ ಹೆಚ್ ಮತ್ತು ವಿಟ್ಲ ಸಮುದಾಯ ಆರೋಗ್ಯ ಹಿರಿಯ ಆರೋಗ್ಯ ಸುರಕ್ಷಣಾಧಿಕಾರಿ ಇಂದಿರಾ, ಸಹಾಯಕಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾರದಾ ವಿಟ್ಲಉಪಸ್ಥಿತರಿದ್ದರು.

ಮೇಲ್ವಿಚಾರಕಿ ರೇಣುಕಾ ಸ್ವಾಗತಿಸಿದರು. ಹಿರಿಯ ಮೇಲ್ವಿಚಾರಕಿ ರೂಪಕಲಾ ವಂದಿಸಿದರು. ಶಿಶು ಅಭಿವೃದ್ಧಿ ಸಹಾಯಕಿ ಯೋಜನಾಧಿಕಾರಿ ಶಾರದಾ ಕೆ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!