March 13, 2026

ವಿಟ್ಲ: ಬೆಂಗಳೂರಿಗೆ ತೆರಳುತ್ತಿದ್ದ ಬಸ್  ಬೈಕ್ ಗೆ ಡಿಕ್ಕಿ: ಬೈಕ್ ಸವಾರ ಗಂಭೀರ

0
image_editor_output_image-9280986-1753806942992

ವಿಟ್ಲ: ಖಾಸಗಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಚಂದಳಿಕೆಯಲ್ಲಿ ನಡೆದಿದೆ.

ವಿಟ್ಲದಿಂದ ಬೆಂಗಳೂರಿಗೆ ತೆರಳುತ್ತಿದ್ದ ಪೂರ್ಣಿಮಾ ಹೆಸರಿನ ಖಾಸಗಿ ಬಸ್ ಮಿತಿ ಮೀರಿದ ವೇಗದಲ್ಲಿ ಓವರ್ ಟೇಕ್ ಮಾಡುವ ಭರದಲ್ಲಿ ಚಲಿಸುತ್ತಿದ್ದ ಪುತ್ತೂರು ಕಡೆಯಿಂದ ಬಂದ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುವನ್ನು ಪೆರುವಾಯಿ ನಿವಾಸಿ ಅರ್ಚಕ ಹರ್ಷ ಭಟ್ ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!