ಪತಿಯ ಸಾವಿನಿಂದ ಖಿನ್ನತೆ: ತಾಯಿ, ಮಗಳು ನೇಣುಬಿಗಿದು ಆತ್ಮಹತ್ಯೆ
ಚಿತ್ರದುರ್ಗ: ಪತಿಯ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ತಾಯಿ ಹಾಗೂ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿಕ್ಕಂದವಾಡಿ ಗ್ರಾಮದಲ್ಲಿ ನಡೆದಿದೆ.
ತಾಯಿ ಗೀತಾ (45), ಮಗಳು ಲಾವಣ್ಯ(17) ವಾರದ ಹಿಂದೆಯೇ ಆತ್ಮಹತ್ಯೆಗೆ ಶರಣಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಂದು (ಮಂಗಳವಾರ) ತಾಯಿ, ಮಗಳು ಆತ್ಮಹತ್ಯೆಗೆ ಶರಣಾಗಿದ್ದು ಪತ್ತೆಯಾಗಿದೆ. ಕೊಳೆತ ಸ್ಥಿತಿಯಲ್ಲಿ ಅಮ್ಮ, ಮಗಳ ಮೃತದೇಹ ಪತ್ತೆಯಾಗಿದೆ.