ಎ.ಆರ್.ರೆಹಮಾನ್-ಸಾಯಿರಾ ಬಾನು ವಿಚ್ಛೇದನ
ನವದೆಹಲಿ: ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಮತ್ತು ಪತ್ನಿ ಸಾಯಿರಾ ಬಾನು ಸುಮಾರು ಮೂರು ದಶಕಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. 29 ವರ್ಷಗಳ ಬಳಿಕ ದಂಪತಿ ವಿಚ್ಛೇದನ ಘೋಷಿಸಿಕೊಂಡಿದ್ದಾರೆ.
ಸಾಯಿರಾ ಅವರ ವಕೀಲ ವಂದನಾ ಶಾ ಅವರು, ದಂಪತಿಯ ವಿಚ್ಛೇದನ ನಿರ್ಧಾರದ ಬಗ್ಗೆ ಅಧಿಕೃತವಾಗಿ ತಿಳಿಸಿದ್ದಾರೆ.
ಎ.ಆರ್.ರೆಹಮಾನ್ ಅವರು 1995 ರಲ್ಲಿ ಸಾಯಿರಾ ಬಾನು ಅವರೊಂದಿಗೆ ವಿವಾಹವಾಗಿದ್ದರು. ದಂಪತಿಗೆ ಖತೀಜಾ, ರಹೀಮಾ ಮತ್ತು ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ.
ಮದುವೆಯಾದ ಹಲವು ವರ್ಷಗಳ ನಂತರ, ಸಾಯಿರಾ ಅವರು ತಮ್ಮ ಪತಿ ಎ.ಆರ್.ರೆಹಮಾನ್ ಅವರಿಂದ ಬೇರ್ಪಡುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.