ಬ್ಯಾರಲ್ ಗೆ ಬಿದ್ದು 3 ವರ್ಷದ ಮಗು ಮೃತ್ಯು
ಶಿಗ್ಗಾಂವ್: ಬಚ್ಚಲ ಮನೆಯಲ್ಲಿ ಇಟ್ಟಿದ್ದ ನೀರಿನ ಬ್ಯಾರಲ್ ನಲ್ಲಿ ಬಿದ್ದು 3 ವರ್ಷದ ಮಗು ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಚಂದಾಪುರ ತಾಂಡದಲ್ಲಿ ನಡೆದಿದೆ.
ಆದಿತ್ಯ ಲಮಾಣಿ (3) ಮೃತಪಟ್ಟ ಮಗು. ಯಲ್ಲಮ್ಮ ಶಂಕರ್ ಲಮಾಣಿ ದಂಪತಿ ತಮ್ಮ ಮಗುವನ್ನು ಬಿಟ್ಟು ಗದ್ದೆ ಕೆಲಸಕ್ಕೆ ಹೋದಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




