February 4, 2026

ಮದುವೆಯಾಗುವುದಾಗಿ ನಂಬಿಸಿ ಯುವತಿ ಮೇಲೆ ಅತ್ಯಾಚಾರ: FIR ದಾಖಲು

0
image_editor_output_image-2046906943-1731874860861.jpg

ಬೆಂಗಳೂರು: ಡೇಟಿಂಗ್ ಆಪ್‌ನಲ್ಲಿ ಪರಿಚಯವಾಗಿ, ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿರುವ ಘಟನೆ ನಗರದಲ್ಲಿ ನಡೆದಿದೆ.

ಸಂತ್ರಸ್ತ ಯುವತಿ ಮಡಿವಾಳ ಪೊಲೀಸ್ ಠಾಣೆಯಲ್ಲಿ ಯುವಕನ ಮೇಲೆ ದೂರು ದಾಖಲಿಸಿದ್ದು, ಮದುವೆಯಾಗುವುದಾಗಿ ನಂಬಿಸಿ ಬಳಿಕ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದಾರೆ

ಕಳೆದ ಮಾರ್ಚ್ ತಿಂಗಳಲ್ಲಿ ಸಂತ್ರಸ್ತ ಯುವತಿಗೆ ಡೇಟಿಂಗ್ ಆಪ್‌ನಲ್ಲಿ ನಿಹಾಲ್ ಹುಸೇನ್‌ನ ಪರಿಚಯವಾಗಿತ್ತು. ಬಳಿಕ ಅದೇ ತಿಂಗಳಲ್ಲಿ ನಿಹಾಲ್ ಯುವತಿಯನ್ನು ಪಾರ್ಟಿಗೆಂದು ಹೋಟೆಲ್‌ಗೆ ಕರೆಯಿಸಿದ್ದ. ಅಲ್ಲಿ ಆಕೆಗೆ ಕೊಟ್ಟ ಜ್ಯೂಸ್‌ನಲ್ಲಿ ಮದ್ಯ ಬೆರೆಸಿ ಅತ್ಯಾಚಾರ ಎಸಗಿದ್ದ. ಬಳಿಕ ಆಕೆ ಗರ್ಭಿಣಿಯಾಗಿದ್ದು, ಮೇ ತಿಂಗಳಲ್ಲಿ ಅಬಾರ್ಷನ್ ಮಾಡಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!