ಹನೀಫ್ ಪುತ್ತೂರು ಪುತ್ರಿ 17 ವರ್ಷದ ಬಾಲಕಿ ನಿಶ್ಮಾ ನಿಧನ
ಪುತ್ತೂರು: ಕಲ್ಲಾರೆಯ ಪ್ಲಾಟ್ ನಿಂದ ಆಕಸ್ಮಿಕವಾಗಿ ಮಹಡಿಯಿಂದ ಬಿದ್ದು ಚಿಕಿತ್ಸೆಗೆ ಒಳಪಟ್ಟಿದ್ದ 17 ವರ್ಷದ ಬಾಲಕಿ ನಿಶ್ಮ ಇಂದು ಮೃತಪಟ್ಟಿದ್ದಾಳೆ.
ಈಕೆ ಕಲ್ಲೇಗ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಪುತ್ತೂರಿನ ಕಲ್ಲಾರೆಯ ಪ್ಲಾಟ್ ನಿವಾಸಿಯಾಗಿರುವ ಹಾಗೂ ಪುತ್ತೂರಿನ ಕಮ್ಯೂನಿಟಿ ಸೆಂಟರ್ ನ ಸ್ಥಾಪಕ, ಆಕ್ರಂದನ ಸಾಕ್ಷ್ಯಚಿತ್ರ ನಿರ್ಮಿಸಿದ, Sunni Today ಬರಹಗಾರ ಹನೀಫ್ ಪುತ್ತೂರು ರವರ ಮಗಳು. ಮೃತಪಟ್ಟ ಬಾಲಕಿ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ದ್ವೀತಿಯ ಪಿ.ಯು.ಸಿ. ವಿಧ್ಯಾರ್ಥಿನಿಯಾಗಿದ್ದಾಳೆ.




