November 21, 2024

ಶಕ್ತಿ ಯೋಜನೆಯಡಿ ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗರೆಡ್ಡಿ

0

ಹುಬ್ಬಳ್ಳಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮಕ್ಕಳೊಂದಿಗೆ ಸಂವಾದ ಮಾಡುವಾಗ ಪುರುಷರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕೊಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಅಂತಹ ಚಿಂತನೆಗಳು ನನ್ನ ಮುಂದೆ ಅಥವಾ ಸರಕಾರದ ಮುಂದೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿಯವರು ನಮಗೆ ಅಧಿಕಾರ ಬಿಟ್ಟು ಕೊಟ್ಟಾಗ ಸಾರಿಗೆ ಸಂಸ್ಥೆಗಳನ್ನು 5,900 ಕೋಟಿ ರೂ. ಸಾಲದಲ್ಲಿ ಮುಳುಗಿಸಿದ್ದಾರೆ. ಹೀಗಾಗಿ ನಿವೃತ್ತ ಹಾಗೂ ಹಾಲಿ ನೌಕರರಿಗೆ ಕೆಲವು ಸೌಲಭ್ಯಗಳನ್ನು ನೀಡಲು ಕಷ್ಟವಾಗಿದೆ. ಅವರ ಅವಧಿಯಲ್ಲಿ ಒಂದೇ ಒಂದು ಬಸ್‌ ಖರೀದಿ ಮಾಡಲಿಲ್ಲ. ನೇಮಕಾತಿಯೂ ಆಗಲಿಲ್ಲ. ಇದೀಗ ನಮ್ಮ ಸರಕಾರ ಬಂದ ಅನಂತರ ಬಸ್‌ಗಳ ಖರೀದಿ, ನೇಮಕಾತಿ ಪ್ರಕ್ರಿಯೆ ನಡೆದಿದೆ ಎಂದರು.

Leave a Reply

Your email address will not be published. Required fields are marked *

error: Content is protected !!