November 21, 2024

ಉಪ್ಪಳ: ತೆಂಗಿನಕಾಯಿ ರುಬ್ಬುತ್ತಿದ್ದಾಗ ಗ್ರೈಂಡರ್‌ಗೆ ಶಾಲು ಸಿಲುಕಿ ಮಹಿಳೆ ಸಾವು

0

ಕಾಸರಗೋಡು: ತೆಂಗಿನಕಾಯಿ ರುಬ್ಬುವ ವೇಳೆ ಗ್ರೈಂಡರ್‌ನಲ್ಲಿ ಶಾಲು ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಉಪ್ಪಳ ಅಪ್ನಾ ಗಲ್ಲಿ ಸಾಬಿತ್ ಮನ್ಸಿಲ್ ನಲ್ಲಿ ಎಎಂಇ ಬ್ರಾಹಿಂ ಅವರ ಪತ್ನಿ ಮೈಮೂನಾ( 47) ಮೃತರು.

ಇಂದು ಬೆಳಗ್ಗೆ ಮನೆಯಲ್ಲಿ ಅಪಘಾತ ಸಂಭವಿಸಿದೆ. ಗ್ರೈಂಡರ್‌ನಲ್ಲಿ ತೆಂಗಿನಕಾಯಿ ರುಬ್ಬುತ್ತಿದ್ದಾಗ ಕೊರಳಲ್ಲಿದ್ದ ಶಾಲು ಗ್ರೈಂಡರ್‌ಗೆ ಸಿಲುಕಿಕೊಂಡಿತ್ತು. ಅಡುಗೆ ಕೋಣೆಯಲ್ಲಿ ಬಿದ್ದಿರುವುದನ್ನು ಕಂಡು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ.

Leave a Reply

Your email address will not be published. Required fields are marked *

error: Content is protected !!