March 18, 2026

Whatsappನಲ್ಲಿ ಸ್ಟೇಟಸ್ ಹಾಕಿ ಯುವತಿ ನೇಣುಬಿಗಿದು ಆತ್ಮಹತ್ಯೆ

0
image_editor_output_image905393092-1731572950177.jpg

ಬೆಂಗಳೂರು: ಮದುವೆಯಾಗವಂತೆ ಪೀಡಿಸುತ್ತಿದ್ದ ಮಾವನ ಕಿರುಕುಳ ಬೇಸತ್ತು 16 ವರ್ಷದ ಅಪ್ರಾಪ್ತೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಶೆಟ್ಟಿಹಳ್ಳಿಯಲ್ಲಿ ನಡೆದಿದೆ.

“USED”ಅಂತ ಸ್ಟೇಟಸ್ ಹಾಕಿ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನವೆಂಬರ್‌‌ 11ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಬಾಲಕಿಗೆ ಮದ್ವೆಯಾಗುವಂತೆ ಪೀಡಿಸಿ ಕಿರುಕುಳ ನೀಡಿದ್ದ 28 ವರ್ಷದ ಮಾವ ಸ್ವಾಗತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆಯಲ್ಲಿ ಬಾಲಕಿಯ ಮರಣೋತ್ತರ ಪರೀಕ್ಷೆ ಮಾಡಲಾಗಿದೆ.

ಯುವತಿಯನ್ನ ಮದುವೆ ಮಾಡಿಕೊಳ್ಳುವಂತೆ ಪಿಡಿಸಿದ್ದಾನೆ. ಇದಕ್ಕೆ ಯುವತಿ ನಿರಾಕರಿಸಿದ್ದಕ್ಕೆ ನೀನು ನಾನು ಹೇಳಿದ ಹಾಗೆ ಕೇಳದಿದ್ದರೆ ನಿನಗೊಂದು ಗತಿ ಕಾಣಿಸುತ್ತೇನಿ. ನೀನು ನನ್ನ ಮಾತು ಕೇಳದಿದ್ದರೆ ಎಲ್ಲಿಯಾದರೂ ಹೋಗಿ ಸಾಯಿ ಎಂದು ಪ್ರಚೋದಿಸಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.

Leave a Reply

Your email address will not be published. Required fields are marked *

error: Content is protected !!