March 18, 2026

ಬಂಟ್ವಾಳ: ಅಡಿಕೆ ಮರದಿಂದ ಬಿದ್ದು ಬೋಳಂಗಡಿಯ ನಿವಾಸಿ ಮೃತ್ಯು

0
image_editor_output_image-271195396-1731572066353.jpg

ಬಂಟ್ವಾಳ: ಅಡಿಕೆ ಮರ ಹತ್ತಿ ಅಡಿಕೆ ಕೀಳುತ್ತಿದ್ದ ಕಾರ್ಮಿಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ಮರದಿಂದ ಬಿದ್ದು ಮೃತಪಟ್ಟ ಘಟನೆ ಪಾಣೆಮಂಗಳೂರಿನ ಬೋಳಂಗಡಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ಬೋಳಂಗಡಿ ಮಜಲ್ ಮನೆ ನಿವಾಸಿ ಜೋನ್ ಲೋಬೊ(45) ಮೃತಪಟ್ಟ ಕಾರ್ಮಿಕ.

ಜೋನ್ ಲೋಬೊ ಅವರು ನ. 13ರಂದು ಬೋಳಂಗಡಿ ಪದ್ಮನಾಭ ಪ್ರಭು ಎಂಬವರ ತೋಟದಲ್ಲಿ ಅಡಿಕೆ ಕೀಳುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಡಿಕೆ ಮರದಿಂದ ಬಿದ್ದಿದ್ದಾರೆ. ತಕ್ಷಣ ಅವರನ್ನು ‌ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಪತ್ನಿ ಸ್ವಪ್ನ ವಿ.ಎಂ. ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!