March 18, 2026

ಕಾಂತಾರ’-1 ಚಿತ್ರೀಕರಣ: ಸಂಭಾವನೆ ಹಣ ಕೊಡದೇ ಅನ್ಯಾಯ: ಜ್ಯೂನಿಯರ್ ಆರ್ಟಿಸ್ಟ್‌ಗಳಿಂದ ಆರೋಪ

0
image_editor_output_image-576434914-1731355122796.jpg

ಕುಂದಾಪುರ: ಕಾಂತಾರ’-1 ಚಿತ್ರೀಕರಣ ಭರದಿಂದ ಸಾಗುತ್ತಿದೆ. ಒಂದಷ್ಟು ಜ್ಯೂನಿಯರ್ ಆರ್ಟಿಸ್ಟ್‌ಗಳು ಕೂಡ ಚಿತ್ರದಲ್ಲಿ ಕೆಲಸ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ನಮಗೆ ಸರಿಯಾಗಿ ಸಂಭಾವನೆ ಹಣ ಕೊಡದೇ ಅನ್ಯಾಯ ಮಾಡುತ್ತಿದ್ದಾರೆ ಎಂದು ಕೆಲ ಜ್ಯೂನಿಯರ್ ಆರ್ಟಿಸ್ಟ್‌ಗಳು ಬೇಸರ ಹೊರಹಾಕಿದ್ದರು.

ಇದಕ್ಕೆ ಸಂಬಂಧಿಸಿದ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದೊಡ್ಡ ಸಿನಿಮಾಗಳಲ್ಲಿ ಹೆಚ್ಚು ಜನರು ಸೇರುವ ಸನ್ನಿವೇಶಗಳನ್ನು ಚಿತ್ರಿಸಲು ಜ್ಯೂನಿಯರ್ ಆರ್ಟಿಸ್ಟ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಅದೇ ರೀತಿ ‘ಕಾಂತಾರ’-1 ಚಿತ್ರದಲ್ಲಿ ಕೂಡ ಒಂದಷ್ಟು ಜನರನ್ನು ಕರೆಸಲಾಗಿದೆ. ಆದರೆ ನಮಗೆ ಸರಿಯಾದ ಸಮಯಕ್ಕೆ ಸಂಭಾವನೆ ನೀಡದೇ ಅನ್ಯಾಯ ಮಾಡುತ್ತಿದ್ದಾರೆ ಎಂದು ಕೆಲವರು ಮಾತನಾಡಿರುವ ವೀಡಿಯೋ ಹರಿದಾಡುತ್ತಿದೆ. ಒಂದಷ್ಟು ಮಹಿಳೆಯರು ಕೂಡ ನಮಗೆ ಪೇಮೆಂಟ್ ಆಗಿಲ್ಲ ಎಂದು ಹೇಳಿದ್ದಾರೆ‌

Leave a Reply

Your email address will not be published. Required fields are marked *

error: Content is protected !!