March 18, 2026

ಮಹಿಳೆಯಾಗಿ ಬದಲಾದ ಟೀಂ ಇಂಡಿಯಾ ಮಾಜಿ ಆಟಗಾರನ ಪುತ್ರ

0
n63871533617313317543486a0f0fea5b8d6f8610a1a34571bf7673d71ef69ab55eb9dd6ee3dbdb8be62672.jpg

ನವ ದೆಹಲಿ: ಟೀಂ ಇಂಡಿಯಾದ ಮಾಜಿ ಆಲ್‌ ರೌಂಡರ್‌, ಮಾಜಿ ಕೋಚ್‌ ಸಂಜಯ್‌ ಬಂಗಾರ್‌ ಅವರ ಪುತ್ರ ಇದೀಗ ಹೆಣ್ಣಾಗಿ ಬದಲಾಗಿದ್ದಾರೆ. ಸಂಜಯ್‌ ಬಂಗಾರ್‌ ಮಗ ಆರ್ಯನ್‌ ಈಗ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ ಮಾಡಿಸಿಕೊಂಡು ‘ಟ್ರಾನ್ಸ್ ವುಮನ್’ ಅಗಿದ್ದು, ಫೋಟೊಗಳನ್ನು ಇನ್ಸ್ಟಾಗ್ರಾಮ್‌ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಹೆಣ್ಣಾಗಿ ಪರಿವರ್ತನೆಗೊಂಡಿದ್ದು, ತಮ್ಮ ಹೆಸರನ್ನು ಅನಯಾ ಎಂದು ಬದಲಾಯಿಸಿಕೊಂಡಿದ್ದಾರೆ. ಪ್ರಸ್ತುತ ಮ್ಯಾಂಚೆಸ್ಟರ್ ನಲ್ಲಿ ವಾಸಿಸುತ್ತಿರುವ ಅನಯಾ ಅವರು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರೊಂದಿಗಿನ ಕೆಲವು ಚಿತ್ರಗಳನ್ನು ರೀಲ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಆರ್ಯನ್, “ಕ್ರಿಕೆಟ್ ಆಡುವ ನನ್ನ ಕನಸು ನನಸಾಗಿಸಲು ಅನೇಕ ತ್ಯಾಗಗಳನ್ನು ಮಾಡಿದ್ದೇನೆ. ಆದರೆ ಆಟದ ಹೊರತಾಗಿ, ನನ್ನ ಸ್ವಂತ ವಿಷಯಕ್ಕೆ ಸಂಬಂಧಿಸಿದ ಪ್ರಯಾಣವೂ ಇದೆ. ನನ್ನೀ ಪಯಣ ಸುಲಭವಾಗಿರಲಿಲ್ಲ. ಆದರೆ, ಇದರಲ್ಲಿ ಗಳಿಸಿದ ಗೆಲುವು ನನಗೆ ಎಲ್ಲಕ್ಕಿಂತ ದೊಡ್ಡದು. ಇದು ಪರಿಶ್ರಮ ಮತ್ತು ಅಚಲ ಸಮರ್ಪಣೆಯಿಂದ ತುಂಬಿದ ಪ್ರಯಾಣ. ಇತರರನ್ನು ಎದುರಿಸಲು ಪ್ರತಿ ಹೆಜ್ಜೆಯಲ್ಲೂ ನನಗೆ ಶಕ್ತಿ ಬೇಕಿತ್ತು” ಎಂದಿದ್ದಾರೆ.

ತನ್ನ ತಂದೆಯಂತೆ ಕ್ರಿಕೆಟಿಗನಾಗಿದ್ದ ಆರ್ಯನ್ ಎಡಗೈ ಬ್ಯಾಟರ್ ಮತ್ತು ಸ್ಥಳೀಯ ಕ್ಲಬ್ ಕ್ರಿಕೆಟ್ ನಲ್ಲಿ ಆಡುತ್ತಿದ್ದರು. ಅವರು ಲೀಸೆಸ್ಟರ್ಶೈರ್ ನ ಹಿಂಕ್ಲೆ ಕ್ರಿಕೆಟ್ ಕ್ಲಬ್ ಅನ್ನು ಕೂಡ ಪ್ರತಿನಿಧಿಸಿದ್ದರು.

ಪ್ರಸ್ತುತ ಅನಯಾ ಇಂಗ್ಲೆಂಡ್ ನ ಮ್ಯಾಂಚೆಸ್ಟರ್ನಲ್ಲಿ ವಾಸಿಸುತ್ತಿದ್ದು, ಸ್ಥಳೀಯ ಕ್ಲಬ್ ಒಂದರಲ್ಲಿ ಆಡುತ್ತಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ECB) ಟ್ರಾನ್ಸ್ಜೆಂಡರ್ ಮಹಿಳೆಯರಿಗೆ ಮಹಿಳಾ ಕ್ರಿಕೆಟ್ ತಂಡದಲ್ಲಿ ಆಡುವುದನ್ನು ನಿಷೇಧಿಸಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!