March 18, 2026

ವಿಟ್ಲ: ಸ್ಮಾರ್ಟ್ ಸಿಟಿಯ ಪ್ರಥಮ ಮಹಡಿಯಲ್ಲಿ ಎಂ.ಎಚ್ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಶೋ ರೂಮ್ ಶುಭಾರಂಭ: ಇಲ್ಲಿ ಗ್ರಾಹಕರಿಗೆ ಶೇ. 40% ಡಿಸ್ಕೌಂಟ್ ಅಫರ್

0
IMG-20241111-WA0003.jpg

ವಿಟ್ಲ: ವಿಟ್ಲದ ಸ್ಮಾರ್ಟ್ ಸಿಟಿಯ ಪ್ರಥಮ ಮಹಡಿಯಲ್ಲಿ ಎಂ.ಎಚ್ ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳು ಮತ್ತು ಗೃಹೋಪಯೋಗಿ ವಸ್ತುಗಳ ಹೊಸ ಶೋ ರೂಮ್‌ ಶುಭಾರಂಭಗೊಂಡಿತು.

ಅಟಕೋಯ ತಂಙಳ್ ಕುಂಬೋಳ್ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ವಾಲೆಮುಂಡೋವ್ ಮಹಮೂದುಲ್ ಪೈಝಿ, ಶಿಯಾಬುದ್ದೀನ್ ತಂಙಳ್ ಮದಕ ದುವಾಃ ಆಶೀರ್ವಚನ ನೀಡಿದರು.

ವಿಟ್ಲ ಶೋಕಾಮಾತೆಯ ಇಗರ್ಜಿಯ ಧರ್ಮಗುರು ಐವನ್ ಮೈಕಲ್ ರೋಡ್ರಿಗಸ್, ಅಬ್ದುಲ್ ರಹಿಮಾನ್ ಫೈಝಿ ಪರ್ತಿಪ್ಪಾಡಿ, ಅಬ್ಬಾಸ್ ಮದನಿ, ಮಜೀದ್ ಮದನಿ, ಕೆ.ಎ ಹಮೀದ್ ಹಾಜಿ ಕೊಡಂಗಾಯಿ, ಶಾಕೀರ್ ಅಳಕೆಮಜಲು, ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಅಶ್ರಪ್ ಸಾಲೆತ್ತೂರು, ವಿಕೆಎಂ ಅಶ್ರಫ್,ಕಲಂದರ್ ಪರ್ತಿಪ್ಪಾಡಿ, ಪವಿತ್ರ ಪೂಜ, ಹಕೀಮ್ ಪರ್ತಿಪ್ಪಾಡಿ ಶುಭ ಹಾರೈಸಿದರು.

ಕಟ್ಟಡ ಮಾಲಕ ಜೈನುದ್ದೀನ್, ಎಂ.ಎಚ್ ಸಂಸ್ಥೆಯ ಹಕೀಮ್ ಹಾಜಿ ಎಂ ಎಚ್, ಇಸ್ಮಾಯಿಲ್ ಶಾಫಿ, ಅಬೂಬಕ್ಕರ್ ಅನಿಲಕಟ್ಟೆ, ಉಬೈದ್ ವಿಟ್ಲ ಬಝಾರ್, ಹಾರೀಸ್ ಎಂ ಎಚ್, ವಿಕೆಎಂ ಹಂಝ, ನಿವೃತ್ತ ಗ್ರಾಮ ಕರಣಿಕ ಮಹಮ್ಮದ್ , ಇಲ್ಯಾಸ್, ಶಫೀಕ್, ಉಪಸ್ಥಿತರಿದ್ದರು.
ನೌಫಲ್ ಕುಡ್ತಮುಗೇರು ಸ್ವಾಗತಿಸಿ, ನಿರೂಪಿಸಿದರು.

ಅನೀಸ್ ಕುಡ್ತಮುಗೇರು ಅವರ ಮಾಲಕತ್ವದ ಎಂ.ಎಚ್ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಶೋ ರೂಮ್ ನಲ್ಲಿ ಎಲ್ಲಾ ರೀತಿಯ ಇಲೆಕ್ಟ್ರಾನಿಕ್ ವಸ್ತುಗಳು ಮತ್ತು ಮನೆಗೆ ಬೇಕಾದ ಫರ್ನಿಚರ್ ದೊರೆಯಲಿದೆ. ಪ್ರತಿಯೊಬ್ಬ ಗ್ರಾಹಕರಿಗೆ ಖರೀದಿಯಲ್ಲಿ ಶೇ. 40 ಡಿಸ್ಕೌಂಟ್ ನೀಡಲಾಗಿದೆ. ಗ್ರಾಹಕರಿಗೆ EMI ಸೌಲಭ್ಯವನ್ನು ಸಂಸ್ಥೆ ನೀಡಿದೆ. ಕೇವಲ 24,485 ರೂ. Combo offer ನೀಡಲಾಗಿದ್ದು, ಅದರಲ್ಲಿ ಮಿಕ್ಸಿ, ಗ್ಯಾಸ್ ಸ್ಟವ್, ಮತ್ತು chimeny ಒಳಗೊಂಡಿದೆ.

Leave a Reply

Your email address will not be published. Required fields are marked *

error: Content is protected !!