ರೈಲು ಇಂಜಿನ್ ಕೋಚ್ ನಡುವೆ ಸಿಲುಕಿ ರೈಲ್ವೆ ಉದ್ಯೋಗಿ ಸಾವು
ಬಿಹಾರ: ಇಂಜಿನ್ – ಕೋಚ್ ನಡುವೆ ಸಿಲುಕಿ ರೈಲ್ವೆ ಪೋರ್ಟರ್ ಮೃತಪಟ್ಟಿರುವ ಘಟನೆ ಬಿಹಾರದ ಗುಸರಾಯ್‌ನ ಬರೌನಿ ಜಂಕ್ಷನ್‌ನಲ್ಲಿ ನಡೆದಿದೆ.
ಅಮರ್ ಕುಮಾರ್ ರಾವ್(25) ಮೃತರು. ಇವರು ಸೊನಾಪುರ ರೈಲ್ವೆ ವಲಯ ವ್ಯಾಪ್ತಿಯ ನಿಲ್ದಾಣದಲ್ಲಿ ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಲಕ್ನೋ-ಬರೌನಿ ಎಕ್ಸ್‌ಪ್ರೆಸ್ (ಸಂಖ್ಯೆ: 15204) ಲಕ್ನೋ ಜಂಕ್ಷನ್‌ನಿಂದ ಆಗಮಿಸುತ್ತಿದ್ದಂತೆ ಬರೌನಿ ಜಂಕ್ಷನ್‌ನ 5 ನೇ ಪ್ಲಾಟ್‌ಫಾರ್ಮ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾವ್ ಮೃತಪಟ್ಟಿದ್ದಾರೆ.
ರೈಲಿನ ಬೋಗಿ ಜೋಡಿಸುವಾಗ ರೈಲಿನ ಇಂಜಿನ್ ಅನಿರೀಕ್ಷಿತವಾಗಿ ಹಿಮ್ಮುಖವಾಗಿ ಚಲಿಸಿದ್ದು, ಬೋಗಿಗಳ ನಡುವೆ ಅವರು ಸಿಲುಕಿದ್ದಾರೆ. ಪರಿಣಾಮ ಅವರ ದೇಹ ಅಪ್ಪಚ್ಚಿಯಾಗಿದೆ.




