ಮಂಗಳೂರು: ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ: ಮುಲ್ಕಿಯಲ್ಲಿ ಆರೋಪಿಯ ಬಂಧನ
ಮಂಗಳೂರು : ತನ್ನದೇ ಕಾಲೊನಿಯಲ್ಲಿದ್ದ ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ಟೋಬರ್ 6 ರಂದು ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳತನ ನಡೆದಿದ್ದು ದೂರು ದಾಖಲಾಗಿತ್ತು.
ಕಾರ್ನಡು ಗ್ರಾಮದ ಲಿಂಗಪ್ಪಯ್ಯ ಕಾಡು ಬಿಜಾಪುರ ಕಾಲೋನಿಯಲ್ಲಿ ಮಲ್ಲಮ್ಮ ಎಂಬವರ ಮನೆಯಲ್ಲಿ ಕಳ್ಳತನ ನಡೆದಿತ್ತು. ಮನೆಯ ಹಿಂಬಾಗಿಲ ಬಾಗಿಲು ಒಡೆದು ಮನೆಯಲ್ಲಿದ್ದ 64 ಗ್ರಾಮ ಚಿನ್ನವನ್ನು ಕದ್ದೊಯ್ಯಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಮುಲ್ಕಿ ಪೊಲೀಸರು ಇದೀಗ ಇದೇ ಕಾಲೋನಿಯಲ್ಲಿ ವಾಸವಾಗಿದ್ದ ಬಿಜಾಪುರ ಮೂಲದ ಅರುಣ್ ಎಂಬಾತನನ್ನು ಬಂಧಿಸಿದ್ದಾರೆ.
20 ವರ್ಷ ಪ್ರಾಯದ ಅರುಣ್ ಹೊಂಚು ಹಾಕಿ ಈ ಕೃತ್ಯ ಎಸಗಿ, ತನಗೇನು ಗೊತ್ತಿಲ್ಲ ಅನ್ನೋ ರೀತಿಯಲ್ಲಿದ್ದ. ಆದ್ರೆ, ತನಿಖೆ ನಡೆಸಿದ ಪೊಲೀಸರಿಗೆ ಈತನ ವರ್ತನೆಯ ಮೇಲೆ ಅನುಮಾನ ಬಂದು ವಿಚಾರಣೆ ನಡೆಸಿದಾಗ ಕಳ್ಳತನದ ವಿಚಾರ ಬಾಯಿಬಿಟ್ಟಿದ್ದಾನೆ.