July 13, 2026

ವಿಟ್ಲ: ಮಾಯಾ ಸಿಲ್ಕ್ಸ್ ಆ್ಯಂಡ್ ಫ್ಯಾಶನ್ಸ್ ಡ್ರೆಸ್ ಮಳಿಗೆ ಶುಭಾರಂಭ: ಪ್ರತಿಯೊಬ್ಬ ಗ್ರಾಹಕರಿಗೆ ಶೇ. 25 ಡಿಸ್ಕೌಂಟ್ ಆಫರ್

0
IMG-20241103-WA0006.jpg

ವಿಟ್ಲ: ಮಾಯಾ ಸಿಲ್ಕ್ಸ್ ಆ್ಯಂಡ್ ಫ್ಯಾಶನ್ಸ್ ಡ್ರೆಸ್ ಮಳಿಗೆ ವಿಟ್ಲ ಪುತ್ತೂರು ಮುಖ್ಯ ರಸ್ತೆಯ ಸ್ಮಾರ್ಟ್ ಸಿಟಿ ಸಂಕೀರ್ಣದ 2ನೇ ಮಹಡಿಯಲ್ಲಿ ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಶುಭಾರಂಭಗೊಂಡಿತು.

ೂತನ ಮಳಿಗೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪ್ರಭಾಕರ್ ಭಟ್ ಕಲ್ಲಡ್ಕ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಿ ನೂತನ ಡ್ರೆಸ್ ಮಳಿಗೆಗೆ ಶುಭ ಹಾರೈಸಿದರು.

ಉದ್ಘಾಟನಾ ಸಮಾರಂಭದಲ್ಲಿ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ಗೌಡ ನಾಯ್ತೊಟ್ಟು, ವಿಟ್ಲ ಅರಮನೆಯ ಕೃಷ್ಣಯ್ಯ ಕೆ, ಗ್ರೀನ್ ಲ್ಯಾಂಡ್ ಇನ್ಫ್ರಾಸ್ಟ್ರಕ್ಚರ್ ಡೆವೆಲಪರ್ಸ್ ಮಾಲಕ ಮೊಹಮ್ಮದ್ ಹನೀಫ್, ಮೂರ್ತೆದಾರರ ಸಹಕಾರಿ ಸಂಘ ಸಜಿಪ ಇದರ ಅಧ್ಯಕ್ಷ ಸಂಜೀವ ಪೂಜಾರಿ ಕೂಚಿಗುಡ್ಡೆ, ಬ್ರಹ್ಮಶ್ರೀ ವಿವಿದೊದ್ದೇಶ ಸಹಕಾರಿ ಸಂಘ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ, ಉದಯ್ ಕುಮಾರ್ ರೈ ಅಗ್ರಿ, ಸಂತೋಷ್ ಕುಮಾರ್ ಇರಂತಬೆಟ್ಟು, ಲಕ್ಷ್ಮಣ ಪೂಜಾರಿ, ಆರ್ ಎಸ್ ಫರ್ನಿಚರ್ & ಇಲೆಕ್ಟ್ರಾನಿಕ್ ವಿಟ್ಲ ಇದರ ಮಾಲಕ ರಮೇಶ್ ಆರ್ ಎಸ್, ಎಂ.ಹೆಚ್ ಮೊಹಮ್ಮದ್, ವಿಠಲ ಕೆಲಿಂಜಗುರಿ, ಕೃಷ್ಣ ಪೂಜಾರಿ, ಸುಧಾಕರ್ ಪೂಜಾರಿ, ರಾಜೇಶ್ ಕುಮಾರ್ ಬಾಳೆಕಲ್ಲು, ಪದ್ಮನಾಭ ಪೂಜಾರಿ ಸಣ್ಣಗುತ್ತು, ಬಾಬು ಕೆ.ವಿ, ಶ್ರೀಧರ ಬಾಳೆಕಲ್ಲು, ಸೇರಿದಂತೆ ಹಲವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ನೂತನ ಉಡುಪುಗಳ ಮಳಿಗೆಗೆ ಶುಭ ಹಾರೈಸಿದರು.

ಯಶವಂತ ಪೂಜಾರಿ ಮಾಲಕತ್ವದ ಮಾಯಾ ಸಿಲ್ಕ್ಸ್ ಆ್ಯಂಡ್ ಫ್ಯಾಶನ್ಸ್ ಡ್ರೆಸ್ ಮಳಿಗೆಯಲ್ಲಿ ಬಾಂಬೆ, ಕಲ್ಕತ್ತ, ಸೂರತ್, ನಾಗಪುರಂ, ಅಹಮದ್ ಬಾದ್ ಎಲ್ಲ ಬ್ರಾಂಡ್ ನ ಉತ್ಪನ್ನಗಳು ಲಭ್ಯವಿದೆ.

ಈ ಮಳಿಗೆಯಲ್ಲಿ ವಿಶೇಷವಾಗಿ ಪ್ರಸಿದ್ಧ ಬ್ರಾಂಡ್ ಗಳನ್ನೂಳಗೊಂಡ ಬೃಹತ್ ಕಲೆಕ್ಷನ್ ಗಳು ಲಭ್ಯವಿದ್ದು, ಪುರುಷರ ವಿವಿಧ ವಿನ್ಯಾಸದ ಶರ್ಟ್ ಗಳು, ಪ್ಯಾಂಟ್ ಪೀಸ್ ಹಾಗೂ ಕಾಂಚೀಪುರಂ, ಫ್ಯಾನ್ಸಿ, ಕಾಟನ್, ರೇಷ್ಮೆ ಹೀಗೆ ಹಲವು ವಿನ್ಯಾಸದ ಸೀರೆಗಳು ಸೇರಿದಂತೆ ಸಾಂಪ್ರದಾಯಿಕ ಉಡುಗೆಗಳು ಹಾಗೂ ಮಕ್ಕಳ ವಿವಿಧ ಶೈಲಿಯ ಫ್ಯಾಷನ್ ಉಡುಪುಗಳು ಹಾಗೂ ಎಲ್ಲಾ ಮಾದರಿಯ ಉಡುಪುಗಳು ವಿಶೇಷ ರಿಯಾಯಿತಿ ದರದಲ್ಲಿ ಒಂದೇ ಸೂರಿನಡಿ ಗ್ರಾಹಕರಿಗೆ ಬೇಕಾಗುವ ಉತ್ತಮ ಗುಣಮಟ್ಟದ ಎಲ್ಲಾ ಮಾದರಿಯ ವಿವಿಧ ವಿನ್ಯಾಸದ ಉಡುಪುಗಳು ದೊರೆಯುತ್ತದೆ.

ಹವಾನಿಯಂತ್ರಿತ ಶೋ ರೂಮ್ ಜೊತೆಗೆ ಸುಸಜ್ಜಿತ ವಿಶಾಲ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿರುವ ಮಾಯಾ ಸಿಲ್ಕ್ಸ್ ಆ್ಯಂಡ್ ಫ್ಯಾಶನ್ಸ್ ಡ್ರೆಸ್ ಮಳಿಗೆ ಇಂದೇ ಭೇಟಿ ನೀಡಿ, ನಿಮ್ಮಿಷ್ಟದ ಬಟ್ಟೆಗಳನ್ನು ಖರೀದಿಸಿ.

ಮಾಯಾ ಸಿಲ್ಕ್ಸ್ ಆ್ಯಂಡ್ ಫ್ಯಾಶನ್ಸ್ ಡ್ರೆಸ್ ಮಳಿಗೆಯಲ್ಲಿ ಶುಭಾರಂಭದ ಪ್ರಯುಕ್ತ ಗ್ರಾಹಕರಿಗೆ ಶೇಕಡಾ 25 ರಷ್ಟು ರಿಯಾಯಿತಿ ನೀಡಲಾಗಿದೆ ಎಂದು ಮಾಲಕ ಯಶವಂತ ಅವರು ತಿಳಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!