ಮಂಗಳೂರು: MRPLಗೆ 683.6 ಕೋಟಿ ರೂಪಾಯಿ ನಷ್ಟ
ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಶುಕ್ರವಾರ ಸೆಪ್ಟೆಂಬರ್ 30, 2024 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ 683.6 ಕೋಟಿ ನಷ್ಟವನ್ನು ವರದಿ ಮಾಡಿದೆ.
ಹಿಂದಿನ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ, ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ 1,059 ಕೋಟಿ ನಿವ್ವಳ ಲಾಭವನ್ನು ದಾಖಲಿಸಿದೆ ಎಂದು ಕಂಪನಿ ತಿಳಿಸಿದೆ.
ಈ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕಂಪನಿ ಕಾರ್ಯಾಚರಣೆಗಳಿಂದ 28,786 ಕೋಟಿ ವರಮಾನ ಗಳಿಸಿದೆ.
ಕಳೆದ ವರ್ಷ ಈ ಅವಧಿಯಲ್ಲಿ 22,844 ಕೋಟಿ ವರಮಾನ ದಾಖಲಿಸಿತ್ತು. ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕಾರ್ಯಾಚರಣೆಗಳ ಮೂಲಕ ಸಂಸ್ಥೆ 56,075 ಕೋಟಿ ವರಮಾನ ಗಳಿಸಿದೆ. ಕಳೆದ ವರ್ಷ ಈ ಅವಧಿಯಲ್ಲಿ ಕಾರ್ಯಾಚರಣೆಗಳ ಮೂಲಕ 47,669 ವರಮಾನ ಗಳಿಸಿತ್ತು.
ಎರಡನೇ ತ್ರೈಮಾಸಿಕದಲ್ಲಿ ಬೆಂಗಳೂರು ಹೊರವಲಯದ ದೇವನಗುಂಡಿಯಲ್ಲಿ ಮಾರುಕಟ್ಟೆ ಟರ್ಮಿನಲ್ ಆರಂಭಿಸಲಾಗಿದ್ದು, ಅತಿಹೆಚ್ಚು ಕಚ್ಚಾತೈಲ ಸಂಸ್ಕರಣೆ ಮಾಡಲಾಗಿದೆ ಎಂದು ತಿಳಿಸಿದೆ.




