February 4, 2026

ತೆಂಗಿನಕಾಯಿ ಬೆಲೆ 50 ರಿಂದ 55 ರೂ.ಗೆ ಏರಿಕೆ

0
image_editor_output_image-1354268330-1729145072947.jpg

ಬೆಂಗಳೂರು: ಕಳೆದ ಕೆಲ ದಿನಗಳಿಂದ ತೆಂಗಿನಕಾಯಿ ದರ ದಾಖಲೆಯ ಏರಿಕೆಯಾಗಿರುವುದು ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ತೆಂಗಿನಕಾಯಿ ಬೆಲೆ 50 ರಿಂದ 55 ರೂ.ಗೆ ಏರಿದೆ. ಗ್ರಾಹಕರಿಗೆ ತೆಂಗಿನಕಾಯಿ ಖರೀದಿ ಹೊರೆಯಾಗಿ ಪರಿಣಮಿಸಿದೆ.

ಕಳೆದ 2 ತಿಂಗಳ ಹಿಂದೆಯಿಂದ ಒಂದು ಕೆಜಿ ತೆಂಗಿನ ಕಾಯಿಗೆ 35 ರಿಂದ 40 ರೂ. ದರ ಇತ್ತು. ಉತ್ತಮ ಗುಣಮಟ್ಟದ ತೆಂಗಿನ ಕಾಯಿಗಳು ಮಾತ್ರ ಒಂದೆರಡು ರೂ. ಪ್ರತಿ ಕೆಜಿಗೆ ಹೆಚ್ಚುವರಿ ಪಡೆಯುತ್ತಿತ್ತು. ಆದರೆ ಪ್ರಸುತ್ತ ಮಾರುಕಟ್ಟೆಯಲ್ಲಿ ಬೇಡಿಕೆಗೆ ತಕ್ಕಂತೆ ತೆಂಗಿನ ಕಾಯಿಗಳ ಪೂರೈಕೆಯಾಗದ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಕಂಡಿದೆ.

ಜನಸಾಮಾನ್ಯರಿಗೆ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ತೆಂಗು ಕೂಡ ದುಬಾರಿಯಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ. ಅದರಲ್ಲೂ ತೆಂಗಿನಕಾಯಿಗಳನ್ನು ಹೆಚ್ಚಾಗಿ ಬಳಸುವ ಹೋಟೆಲ್‌ ಉದ್ಯಮಕ್ಕೆ ಮತ್ತಷ್ಟು ಹೊರೆಯಾಗುತ್ತಿದೆ. ಕೆಲವೆಡೆ ಹಾಸನ, ತುಮಕೂರುಗಳಿಂದ ತೆಂಗಿನ ಕಾಯಿ ತರಿಸಿಕೊಳ್ಳುವ ಕೆಲಸ ಆಗುತ್ತಿದೆ. ಸದ್ಯಕಂತು ಬೆಲೆ ಇಳಿಯುವ ಸಾಧ್ಯತೆ ಕಡಿಮೆ ಎಂಬುದು ಕೇಳಿಬರುತ್ತಿದೆ.

Leave a Reply

Your email address will not be published. Required fields are marked *

error: Content is protected !!