February 4, 2026

ಮೂಡಿಗೆರೆ: ರಸ್ತೆಯ ಮಧ್ಯೆಯೇ ಪಲ್ಟಿಯಾದ ಟಿಟಿ ವಾಹನ

0
image_editor_output_image-1665569272-1728899271976.jpg

ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿದ ಟಿಟಿ ವಾಹನವೊಂದು ರಸ್ತೆಯ ಮಧ್ಯೆಯೇ ಪಲ್ಟಿಯಾದ ಘಟನೆ ಮೂಡಿಗೆರೆ ತಾಲೂಕಿನ ಸಂಪಿಗೆಖಾನ್ ಬಳಿ ಸೋಮವಾರ ನಡೆದಿದೆ.

ಟಿಟಿ ವಾಹನದಲ್ಲಿ 15 ಜನ ಪ್ರಯಾಣಿಕರಿದ್ದರು ಎನ್ನಲಾಗಿದ್ದು 9 ಜನರಿಗೆ ಗಾಯಗಳಾಗಿವೆ, ಗಾಯಾಳುಗಳನ್ನು ಕಳಸ, ಮೂಡಿಗೆರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಂಗಳೂರಿನಿಂದ ಹೊರನಾಡಿಗೆ ಬಂದಿದ್ದ ಟಿಟಿ ವಾಹನ ಅನ್ನಪೂರ್ಣೇಶ್ವರಿ ದರ್ಶನ ಮುಗಿಸಿ ವಾಪಸು ಹೊರಟಿತ್ತು ಈ ವೇಳೆ ವಾಹನ ಸಂಪಿಗೆಖಾನ್ ಬಳಿ ಬರುತ್ತಿದ್ದಂತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಕಳಸ ಭಾಗದಲ್ಲಿ ಕಳೆದ ಎರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದ್ದು ಚಾಲಕನ ನಿಯಂತ್ರಣ ತಪ್ಪಲು ಇದು ಕೂಡ ಕಾರಣ ಎನ್ನಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!