October 18, 2024

ಜೂ.26: ಅನಿಲಕಟ್ಟೆ ಮಡವೂರ್ ಸಿ.ಎಂ. ಮಖಾಂ ಎಜುಕೇಶನ್ ಮತ್ತು ಕಲ್ಚರಲ್ ಕಾಂಪ್ಲೆಕ್ಸ್ ಗೆ ಶಿಲಾನ್ಯಾಸ ಮತ್ತು ಸ್ವಲಾತ್ ಮಜ್ಲಿಸ್.

0

ವಿಟ್ಲ ; ಅನಿಲಕಟ್ಟೆ ಮಡವೂರ್ ಸಿ.ಎಂ ಮಖಾಂ ಎಜುಕೇಶನ್ ಮತ್ತು ಕಲ್ಚರಲ್ ಕಾಂಪ್ಲೆಕ್ಸ್ ನ ಶಿಲಾನ್ಯಾಸ ಕಾರ್ಯಕ್ರಮವು 26-6-2024 ನೇ ಬುಧವಾರ ಮಧ್ಯಾಹ್ನ ಮಡವೂರ್ ಮಖಾಂ ಅಧ್ಯಕ್ಷ ಎನ್.ಪಿ.ಎಂ.ಝೈನುಲ್ ಆಬೀದೀನ್ ತಂಙಳ್ ನೇತ್ರತ್ವದಲ್ಲಿ ಮಧ್ಯಾಹ್ನ 2-00 ಗಂಟೆಗೆ ನಡೆಯಲಿದೆ.
ಲುಹರ್ ನಮಾಝ್ ಬಳಿಕ ಮಡವೂರ್ ಸ್ವಲಾತ್ ಮಜ್ಲಿಸ್ ನಡೆಯಲಿದೆ.


ಈ ಪುಣ್ಯ ಕಾರ್ಯಕ್ರಮದಲ್ಲಿ ಅನಿಲಕಟ್ಟೆ ಮಡವೂರ್ ಯತೀಂ ಖಾನಾ ಇದರ ಅಧ್ಯಕ್ಷ ಸೈಯದ್ ಹುಸೈನ್ ಬಾಅಲವಿ ತಂಙಳ್ ,ಕುಕ್ಕಾಜೆ , ಪ್ರಧಾನ ಕಾರ್ಯದರ್ಶಿ ಅಲ್ ಹಾಜ್ ಸರಪುದ್ದೀನ್ ಮಾಸ್ಟರ್,ಜಮಾಅತ್ ಅಧ್ಯಕ್ಷ ಮೂತಾಡ್ ಅಬ್ದುಲ್ ರಹಿಮಾನ್ ಮಾಸ್ಟರ್, ಜಮಾಅತ್ ಪ್ರಧಾನ ಕಾರ್ಯದರ್ಶಿ ಕೆ. ಮಹಮ್ಮದ್ ಮಾಸ್ಟರ್,ಫೈಝಲ್ ಫೈಝಿ ಮಡವೂರ್, ಪಿ.ಎ.ಮಹಮ್ಮದ್ ಮುಸ್ಲಿಯಾರ್ ಹಾಗೂ ಹಲವು ಸಾದಾತ್ ಗಳು,ಸೈಯದ್ ಗಳು,ಧಾರ್ಮಿಕ ಪಂಡಿತರು ಭಾಗವಹಿಸಲಿದ್ದಾರೆ.
ಆದ್ದರಿಂದ ಈ ಪುಣ್ಯ ಕಾರ್ಯಕ್ರಮದಲ್ಲಿ ದೀನಿ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!