May 5, 2026

ಕಲ್ಲಡ್ಕದಲ್ಲಿ ನೀರಿನಲ್ಲಿ ತೇಲಾಡುವ ವಾಹನಗಳು: ಪೇಟೆಯಲ್ಲಿ ಪ್ರವಾಹ ವಿಡಿಯೋ ವೈರಲ್

0
image_editor_output_image-1665703516-1719197948026

ಬಂಟ್ವಾಳ: ಅಭಿವೃದ್ಧಿ ಹೊಂದುತ್ತಿರುವ ಕಲ್ಲಡ್ಕದ ಪೇಟೆಯಲ್ಲಿ ತೇಲಾಡುವ ಕಾರುಗಳು, ಇದು ಇಂದಿನ ಮಳೆಗೆ ಕಂಡು ಬಂದ ದೃಶ್ಯ.

ಪದೇ ಪದೇ ಕಲ್ಲಡ್ಕದ ಸ್ಥಿತಿ ಹೇಳಲು ನಾಚಿಕೆಯಾದರೂ ವಿಧಿಯಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅನೇಕ ವಿಡಿಯೋಗಳು ನಿತ್ಯ ವೈರಲ್ ಆಗುತ್ತಿದೆ.

ಕಳೆದ ಮೂರು ವರ್ಷಗಳಿಂದ ಕಲ್ಲಡ್ಕ ದ ಜನತೆಯ ಜೊತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಮಾಡುವ ವಾಹನ ಸವಾರರ ಕಷ್ಟವನ್ನು ಎಷ್ಟು ಹೇಳಿದರು ಮುಗಿಯದ ಕಥೆ.

‌ಮಳೆಗಾಲ ಆರಂಭವಾಗುವ ಮುನ್ನ ವೇ ಮಾಧ್ಯಮಗಳು ಎಚ್ಚರಿಸಿದ್ದವು. ಇಲ್ಲಿ ನೀರು ಹರಿದು ಹೋಗಲು ಚರಂಡಿಯನ್ನು ನಿರ್ಮಿಸಿ, ಜೊತೆಗೆ ಕನಿಷ್ಠ ಸರ್ವೀಸ್ ರಸ್ತೆಗೆ ಡಾಮರು ಹಾಕಿ ಕೊಡಿ ಎಂದು. ಆದರೆ ಕಿವಿ ಕೇಳದ ಇಲಾಖೆ ಹಾಗೂ ಗುತ್ತಿಗೆ ದಾರರ ಬೇಜಾವಬ್ದರಿತನಕ್ಕೆ ವಾಹನ ಸವಾರರು ಬಲಿಯಾಗುತ್ತಿದ್ದಾರೆ.

ಇನ್ನು ಮಳೆಗಾಲ ಆರಂಭದಲ್ಲಿ ಈರೀತಿಯಾದರೆ ಇನ್ನು ಮಳೆಗಾಲ ಮುಗಿಯುವ ವೇಳೆ ವಾಹನಗಳ ಸ್ಥಿತಿ ಹೇಗಿರಬಹುದು

Leave a Reply

Your email address will not be published. Required fields are marked *

error: Content is protected !!