May 6, 2026

ಪುತ್ತೂರು: ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

0
image_editor_output_image-110931890-1718971676135.jpg

ಪುತ್ತೂರು: ಪುತ್ತೂರಿನ ಹೊಟೇಲ್‌ವೊಂದರ ಸಪ್ಲಾಯರ್ ನಾಪತ್ತೆಯಾದ ಕುರಿತು ಆತನ ಪತ್ನಿ ಪುತ್ತೂರು ನಗರ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ.

ನೆಲ್ಲಿಕಟ್ಟೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿರುವ ಬೊಳುವಾರಿನ ನ್ಯೂ ಹೊಟೇಲ್ ಹರಿಪ್ರಸಾದ್‌ನಲ್ಲಿ ಸಪ್ಲಾಯ‌ರ್ ಆಗಿದ್ದ ಶಿವಪ್ಪ ಯಾನೆ ಶಿವಣ್ಣ (45ವ) ಎಂಬವರು ನಾಪತ್ತೆಯಾದವರು.

ಅವರ ಪತ್ನಿ ಗೀತಾ ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನನ್ನ ಗಂಡ ಶಿವಪ್ಪ ಯಾನೆ ಶಿವಣ್ಣ ಅವರು ಬೊಳುವಾರು ನ್ಯೂ ಹರಿಪ್ರಸಾದ್‌ ಹೊಟೇಲ್‌ನಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಮೂರು ತಿಂಗಳಿನಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದರು.

ಜೂ.10ರಂದು ಬೆಳಿಗ್ಗೆ ಅವರು ಪೇಟೆಗೆ ಹೋಗಿ ಬರುವುದಾಗಿ ತಿಳಿಸಿ ಮನೆಯಿಂದ ಹೋದವರು ಹಿಂದಿರುಗಿಲ್ಲ.

Leave a Reply

Your email address will not be published. Required fields are marked *

error: Content is protected !!