May 6, 2026

ಎಚ್.ಡಿ. ಕುಮಾರಸ್ವಾಮಿ ಅಫಿಡವಿಟ್ ನಲ್ಲಿ ಸಲ್ಲಿಸಿರುವ ಆಸ್ತಿ ಎಷ್ಟು ಕೋಟಿ ಗೊತ್ತೇ?

0
image_editor_output_image-210896567-1712277168483.jpg

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದ್ದು, ಅದರ ಜೊತೆಗೆ ಸಲ್ಲಿಸಿದ ಅಫಿಡವಿಟ್ ಪ್ರಕಾರ ಜೆಡಿಎಸ್ ರಾಜ್ಯಾಧ್ಯಕ್ಷ ಒಟ್ಟು 217.21 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.

ಕುಮಾರಸ್ವಾಮಿ ಹಾಗೂ ಅವರ ಪತ್ನಿ ಅನಿತಾ ಕುಮಾರಸ್ವಾಮಿ 217.21 ಕೋಟಿ ರೂಪಾಯಿ ಒಡೆಯರಾಗಿದ್ದು, ಒಟ್ಟು ಚರಾಸ್ತಿ– 102.23 ಕೋಟಿ ರೂ. ಹಾಗೂ ಕುಟುಂಬದ ಒಟ್ಟು ಸ್ಥಿರಾಸ್ತಿ-114.98 ಕೋಟಿ ರೂ. ಒಟ್ಟು 217.21 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಮಾಜಿ ಸಿಎಂ ಘೋಷಿಸಿಕೊಂಡಿದ್ದಾರೆ.

ವಿಶೇಷ ಅಂದರೆ ಕಳೆದ ವರ್ಷಕ್ಕಿಂತ ಈ ಕುಮಾರಸ್ವಾಮಿ ಆಸ್ತಿ ಮೌಲ್ಯ 50.07 ಕೋಟಿ ರೂ. ಹೆಚ್ಚಳವಾಗಿದೆ. ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ತಮ್ಮ ಪತಿ, 65 ವರ್ಷದ ಕುಮಾರಸ್ವಾಮಿಗಿಂತ ಶ್ರೀಮಂತರಾಗಿದ್ದು, ಒಟ್ಟು 154.39 ಕೋಟಿ ರೂ. ಆಸ್ತಿ ಹೊಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!