May 6, 2026

ವಿಟ್ಲ: ಖಾಸಗಿ ಬಸ್ ಮತ್ತು ಕಾಂಕ್ರೀಟ್ ಮಿಕ್ಸರ್ ಪಿಕಪ್ ನಡುವೆ ಅಪಘಾತ: ಹಲವು ಮಂದಿಗೆ ಗಾಯ

0
image_editor_output_image1757993907-1712212781326

ವಿಟ್ಲ: ಕಲ್ಲಡ್ಕ ರಸ್ತೆಯ ಗೋಳ್ತಮಜಲು ಎಂಬಲ್ಲಿ ಬಸ್ಸಿಗೆ ಪಿಕಪ್ ಮುಖಾಮುಖಿ ಢಿಕ್ಕಿಯಾಗಿ ಹಲವರು ಗಾಯಗೊಂಡಿದ್ದಾರೆ.

ವಿಟ್ಲ ಕಡೆಗೆ ಕಾಂಕ್ರೀಟ್ ಮಿಕ್ಸರ್ ಯಂತ್ರವನ್ನು ಒಯ್ಯುತ್ತಿದ್ದ ಪಿಕಪ್ ಆಕಸ್ಮಿಕವಾಗಿ ವಿಟ್ಲದಿಂದ ಮಂಗಳೂರಿಗೆ ಸಾಗುತ್ತಿದ್ದ ಖಾಸಗಿ ಬಸ್ಸಿಗೆ ಢಿಕ್ಕಿಯಾಗಿದೆ. ಪಿಕಪ್ ನಲ್ಲಿ ಕಾಂಕ್ರೀಟ್ ಹಾಕಲು ಹಲವು ಮಂದಿ ಇದ್ದರೆನ್ನಲಾಗಿದೆ. ಬಸ್ಸಿನ ಬೆಳಗ್ಗಿನ ಟ್ರಿಪ್ ನಲ್ಲಿ ಪ್ರಯಾಣಿಕರು ತುಂಬಿಕೊಂಡಿದ್ದರೆನ್ನಲಾಗಿದೆ. ಹಲವರು ಗಾಯಗೊಂಡಿದ್ದು ವಿವರ ಲಭ್ಯವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!