August 13, 2026

ಮಲ್ಪೆ: ಆಟೋರಿಕ್ಷಾ ಚಾಲಕ ನಾಪತ್ತೆ

0
image_editor_output_image-1866517043-1711756632577.jpg

ಮಲ್ಪೆ: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಮನೆಯಿಂದ ಹೋದ ಆಟೋರಿಕ್ಷಾ ಚಾಲಕರೊಬ್ಬರು ನಾಪತ್ತೆಯಾಗಿದ್ದಾರೆ. ಮಾ. 27ರ ರಾತ್ರಿಯಿಂದ ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೂಡುತೋನ್ಸೆ ಗ್ರಾಮದ ಮಹಮ್ಮದ್ ಫೈಝಲ್(36 ವರ್ಷ) ಬಾಡಿಗೆ ಇದೆ ಎಂದು ಆಟೋ ಚಲಾಯಿಸಿಕೊಂಡು ಹೋದ ಗಂಡ
ತಡರಾತ್ರಿಯಾದರೂ ಮನೆಗೆ ಬಾರದಿರುವಾಗ ಪತ್ನಿ ಅವರ ಮೊಬೈಲ್‌ಗೆ ಕರೆ ಮಾಡಿದರೆ ಸ್ವಿಚ್‌ಆಫ್ ಬರುತ್ತಿತ್ತು.

ಬಳಿಕ ಫೈಝಲ್ ಅವರ ಆಟೋರಿಕ್ಷಾ ಮನೆ ಬಳಿಯ ಮೈದಾನದ ಬಳಿ ನಿಲ್ಲಿಸಿರುವುದು ಪತ್ತೆಯಾಗಿದೆ. ಫೈಝಲ್ ಆಟೋರಿಕ್ಷಾ ಚಾಲಕ ವೃತ್ತಿಯ ಜತೆಗೆ ಟೈಲ್ಸ್ ಜೋಡಿಸುವ ಕೆಲಸವನ್ನೂ ಸಹ ಮಾಡಿಕೊಂಡಿದ್ದರು.

ಕಾಣೆಯಾದ ಫೈಝಲ್ ಎತ್ತರ 5.5 ಅಡಿ, ಗೋದಿ ಮೈಬಣ್ಣ, ಕನ್ನಡ, ತುಳು, ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಅವರ ಸುಳಿವು ಸಿಕ್ಕವರು ಮಲ್ಪೆ ಠಾಣೆಗೆ ಮಾಹಿತಿಯನ್ನು ನೀಡುವಂತೆ ಕೋರಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!