March 20, 2026

ಬಂಟ್ವಾಳ: 17 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

0
image_editor_output_image2146058005-1711701034331.jpg

ಬಂಟ್ವಾಳ: ಸುಮಾರು 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಪ್ರಕರಣವೊಂದರ ಆರೋಪಿಯನ್ನು‌ ಬಂಟ್ವಾಳ‌ ಪೊಲೀಸರು ಬಂಧಿಸಿದ್ದಾರೆ.

ನಗರ ಪೊಲೀಸ್ ಠಾಣಾ ಅ.ಕ್ರ :189/2007
ಕಲಂ : 504,506,323,324 ಜೊತೆಗೆ 34 ಐಪಿಸಿ ಪ್ರಕರಣದ ಆರೋಪಿಯಾದ, ಮಂಚಿ ಕುಕ್ಕಾಜೆಯ ನಿವಾಸಿ ಅಬುಸಾಲಿ (41), ಸುಮಾರು 17 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನು.

ದಿನಾಂಕ: 29.03.2024 ರಂದು, ಬಂಟ್ವಾಳ ನಗರ ಠಾಣಾ ಪೊಲೀಸ್ ಉಪ ನಿರೀಕ್ಷಿಕರಾದ ಶ್ರೀ ರಾಮಕೃಷ್ಣ ರವರು ಮತ್ತು ಹೆಚ್ ಸಿ 1023 ರಾಜೇಶ್ ಎಸ್, ಹೆಚ್ ಸಿ 1028 ಗಣೇಶ್ ಏನ್ ರವರುಗಳ ತಂಡ, ಬೆಳ್ತಂಗಡಿ ತಾಲೂಕಿನ ಸಂತೆಕಟ್ಟೆ ಎಂಬಲ್ಲಿ ದಸ್ತಗಿರಿ ಮಾಡಿ ಮಾನ್ಯ ಬಂಟ್ವಾಳ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!