ಮಂಗಳೂರು: Whatsappನಲ್ಲಿ ಪಾರ್ಟ್ ಟೈಂ ಜಾಬ್ ಹೆಸರಿನಲ್ಲಿ 1.15 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
ಮಂಗಳೂರು: ಸೈಬರ್ ಕ್ರೈಂ ಗೆ ಸಂಬಂಧಿಸಿದಂತೆ ಮಂಗಳೂರಿನ ಸೆನ್ ಪೊಲೀಸರು ಆರೋಪಿಯೊಬ್ಬನನ್ನು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ.
ವಾಟ್ಸಾಪ್ ನಲ್ಲಿ ಪಾರ್ಟ್ ಜಾಬ್ ಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರಿಂದ 1.15 ಲಕ್ಷ ಹಣ ವಂಚನೆ ಪ್ರಕರಣದಲ್ಲಿ ಈ ಬಂಧನವಾಗಿದೆ. ಬಂಧಿತ ಆರೋಪಿಯನ್ನು ರಾಜಸ್ಥಾನದ ಜೋದ್ ಪುರ್ ಜಿಲ್ಲೆಯ ಸದ್ದಾಂ ಗೌರಿ ಯಾನೆ ಬಾವುರಿ ಎಂದು ಗುರುತಿಸಲಾಗಿದೆ.
ಆರೋಪಿ ವಾಟ್ಸ್ ಆಫ್ ನಲ್ಲಿ ಪಾರ್ಟ್ ಟೈಮ್ ಜಾಬ್ ಇರುವುದಾಗಿ ಪಿರ್ಯಾದಿದಾರಿಗೆ ಸಂದೇಶ ಕಳುಹಿಸಿ ಪಾರ್ಟ ಟೈಂ ಜಾಬ್ ಹೆಸರಿನಲ್ಲಿ ಲಿಂಕ್ ಕಳುಹಿಸಿ ಈ ಲಿಂಕ್ ಮುಖಾಂತರ ಹಣ ತೊಡಗಿಸಿ, ಟಾಸ್ಕ್ ಕಂಪ್ಲೀಟ್ ಮಾಡುವ ಮುಖಾಂತರ ಹಣ ಮಾಡಬಹುದು ಎಂಬುದಾಗಿ ಪಿರ್ಯಾದಿದಾರರನ್ನು ನಂಬಿಸಿ ಪಿರ್ಯಾದಿದಾರರಿಂದ ಒಟ್ಟು 1,15,000 ಹಣ ಪಡೆದು ವಂಚನೆ ಮಾಡಿದ್ದಾನೆ.