March 18, 2026

ಕ್ಯಾನ್ಸರ್‌ನಿಂದ ನಟಿ ಡಾಲಿ ಸೋಹಿ ನಿಧನ

0
image_editor_output_image-699002733-1709889019635.jpg

ಮುಂಬಯಿ: ಝಾನಕ್ ಮತ್ತು ಭಾಭಿ ಟಿವಿ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದ್ದ ನಟಿ ಡಾಲಿ ಸೋಹಿ (47) ಅವರು ಗರ್ಭಕಂಠದ ಕ್ಯಾನ್ಸರ್‌ನಿಂದಾಗಿ ನವಿ ಮುಂಬೈನ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ನಿಧನರಾದರು ಎಂದು ಅವರ ಸಹೋದರ ಮನ್‌ಪ್ರೀತ್ ಹೇಳಿದ್ದಾರೆ.

ನಟಿ ಡಾಲಿ ಸೋಹಿ ಅವರು ಕಳೆದ ಆರು ತಿನ್ನಗಳಿಂದ ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎಂದು ಹೇಳಲಾಗಿದ್ದು ಶುಕ್ರವಾರ ಬೆಳಿಗ್ಗೆ ಚಿಕಿತ್ಸೆ ಫಲಿಸದೆ ನಿಧನ ಹೊಂದಿರುವುದಾಗಿ ಕುಟುಂಬ ಮೂಲಗಳು ಮಾಹಿತಿ ನೀಡಿವೆ.

ಡಾಲಿ ಸೋಹಿ ಮೃತಪಟ್ಟ ಕೆಲವೇ ಗಂಟೆಗಳ ಮೊದಲು ಅಂದರೆ ಮಾರ್ಚ್ ೭ ರಂದು ಡಾಲಿ ಸೋಹಿಯಾ ಸಹೋದರಿ ಅಮನ್‌ದೀಪ್ ಸೋಹಿ ಜಾಂಡೀಸ್ ಕಾಯಿಲೆಯಿಂದ ನಿಧನರಾಗಿದ್ದರು.

ಈ ಕುರಿತು ಹೇಳಿಕೆ ನೀಡಿದ ಸಹೋದರ ನನ್ನ ಸಹೋದರಿ ಡಾಲಿ ಸೋಹಿ ಅಪೋಲೋ ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ 4.00 ರ ಸುಮಾರಿಗೆ ನಿಧನರಾದರು. ಆಕೆಗೆ ಗರ್ಭಕಂಠದ ಕ್ಯಾನ್ಸರ್ ಇತ್ತು, ಅದು ಅವಳ ಶ್ವಾಸಕೋಶಕ್ಕೆ ಹರಡಿತ್ತು, ಆಕೆಯ ಆರೋಗ್ಯ ಹದಗೆಟ್ಟಿದ್ದರಿಂದ ನಾವು ನಿನ್ನೆ ರಾತ್ರಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದೆವು ಆದರೆ ಆಕೆ ಬದುಕುಳಿಯಲಿಲ್ಲ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!