May 6, 2026

ಅಕ್ರಮವಾಗಿ ಸಂಗ್ರಹಿಸಿದ್ದ 40 ಕೆ.ಜಿ ಚಿನ್ನ, 6 ಕೆ.ಜಿ ಬೆಳ್ಳಿ 5.43 ಕೋಟಿ ರೂ. ನಗದು ಜಪ್ತಿ

0
image_editor_output_image-2052112433-1709876466214.jpg

ದಿಲ್ಲಿ: ಅಕ್ರಮವಾಗಿ ಸಂಗ್ರಹಿಸಿದ್ದ 40 ಕೆ.ಜಿ ಚಿನ್ನ, 6 ಕೆ.ಜಿ ಬೆಳ್ಳಿ 5.43 ಕೋಟಿ ರೂ. ನಗದು ಜಪ್ತಿ ಮಾಡಲಾಗಿದೆ.

ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಅಧಿಕಾರಿಗಳಿಂದಬಿಹಾರದ ಅರಾರಿಯಾ, ಮುಂಬೈ, ಮಥುರಾ, ಗುರುಗ್ರಾಮದಲ್ಲಿ ಕಾರ್ಯಾಚರಣೆ ಮಾಡಿ ಜಪ್ತಿ ಮಾಡಲಾಗಿದೆ. ಸದ್ಯ 12 ಆರೋಪಿಗಳನ್ನು ಬಂಧಿಸಿ ಡಿಆರ್‌ಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ವಿದೇಶದಿಂದ ಅಕ್ರಮವಾಗಿ ಚಿನ್ನ ತರಿಸಿ ಸಂಗ್ರಹಿಸಿದ್ದರು.

ಮತ್ತೊಂದು ಪ್ರಕರಣದಲ್ಲಿ ಮಿಜೋರಾಂನ ಚಂಫೈನಲ್ಲಿ ಸೇನೆ ಮತ್ತು ಪೊಲೀಸ ಕಾರ್ಯಾಚರಣೆಯಿಂದಾಗಿ ಅಕ್ರಮವಾಗಿ ಸಾಗಿಸುತ್ತಿದ್ದ 47 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ಅಸ್ಸಾಂ ರೈಫಲ್ಸ್ ಸಿಬ್ಬಂದಿ ಮಿಜೋರಾಂನ ಲಾಂಗ್ಟ್ಲೈ ಜಿಲ್ಲೆಯಲ್ಲಿ ಸ್ನೈಪರ್ ರೈಫಲ್ನ, 10 ನಿಷ್ಕ್ರಿಯ ನೈಟ್ ವಿಷನ್ (ಪಿಎನ್ಎಸ್) ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾಪಡೆ ತಿಳಿಸಿದೆ.

ಜೊತೆಗೆ ರಾಜ್ಯದ ಗಡಿ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಅಕ್ರಮ ದಂಧೆಯಲ್ಲಿ ತೊಡಗಿದ್ದ ಹಲವು ವ್ಯಕ್ತಿಗಳನ್ನು ಬಂಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!