February 4, 2026

ಚಾಕೋಲೇಟ್‌ ಎಂದುಕೊಂಡು ಮನೆಯಲ್ಲಿದ್ದ ಮಾತ್ರೆ ಸೇವಿಸಿದ್ದ ಮಗು ಮೃತ್ಯು

0
image_editor_output_image1534922504-1709840594683.jpg

ಚಿತ್ರದುರ್ಗ: ಚಾಕೋಲೇಟ್‌ ಎಂದುಕೊಂಡು ಮನೆಯಲ್ಲಿದ್ದ ಮಾತ್ರೆ ಸೇವಿಸಿದ್ದ 4 ವರ್ಷದ ಗಂಡು ಮಗು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದೆ.

ಚಿತ್ರದುರ್ಗ ತಾಲೂಕು ಕಡಬನಕಟ್ಟೆ ನಿವಾಸಿ ವಸಂತಕುಮಾರ್‌ ಹಾಗೂ ಪವಿತ್ರಾ ದಂಪತಿ ಪುತ್ರ ಹೃತ್ವಿಕ್‌ ಮೃತಪಟ್ಟ ಮಗು. ಮಾ.2ರಂದು ಮಧ್ಯಾಹ್ನ 12:30ರ ಸುಮಾರಿಗೆ ಮನೆಯಲ್ಲಿ ಯಾರೂ ಯಾರೂ ಇಲ್ಲದ ವೇಳೆ ಕಪಾಟಿನಲ್ಲಿದ್ದ ಮಾತ್ರೆಗಳನ್ನು ಮಗು ತಿಂದಿದೆ. ನಂತರ ಸುಸ್ತಾಗಿದ್ದು, ತಾಯಿಗೆ ಸನ್ನೆಯ ಮೂಲಕ ಮಾತ್ರೆ ತಿಂದಿರುವುದನ್ನು ತಿಳಿಸಿದೆ.

ತಕ್ಷಣ ಮಗುವನ್ನು ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಸೇರಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಾ.3ರಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾ.6ರಂದು ಮಗು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಈ ಕುರಿತು ಮೃತ ಮಗುವಿನ ತಂದೆ ವಸಂತಕುಮಾರ್‌ ತುರುವನೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

Leave a Reply

Your email address will not be published. Required fields are marked *

error: Content is protected !!