May 6, 2026

ವಿಧಾನಸೌಧದಲ್ಲಿ ‘ಪಾಕಿಸ್ಥಾನ ಜಿಂದಾಬಾದ್’ ಘೋಷಣೆ ಕೂಗಿದ ಆರೋಪ: ಮೂವರ ಬಂಧನ

0
IMG-20230504-WA0062.jpg

ಬೆಂಗಳೂರು: ವಿಧಾನಸೌಧದ ಕಾರಿಡಾರ್ ನಲ್ಲಿ ‘ಪಾಕಿಸ್ಥಾನ ಜಿಂದಾಬಾದ್’ ಎಂಬ ದೇಶದ್ರೋಹಿ ಘೋಷಣೆ ಕೂಗಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ಸೋಮವಾರ ಬಂಧಿಸಲಾಗಿದೆ.

ವಿಧಾನ ಸೌಧ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಇಲ್ತಾಜ್, ಮುನಾವರ್ ಮತ್ತು ಮೊಹಮದ್ ನಾಶಿಪುಡಿ ಎಂಬವರನ್ನು ಬಂಧಿಸಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ನಾಸಿರ್ ಹುಸೇನ್ ಅವರು ಜಯ ಸಾಧಿಸಿದ ಬಳಿಕ ಸಂಭ್ರಮಾಚರಣೆ ನಡೆಸುವ ವೇಳೆ ಘೋಷಣೆ ಕೇಳಿ ಬಂದಿರುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಹಲವು ವೀಡಿಯೋ ತುಣುಕುಗಳನ್ನು ವಿಧಿವಿಜ್ಞಾನ ಪ್ರಯೋ ಗಾಲಯ(ಎಫ್ಎಸ್‌ಎಲ್‌)ಕ್ಕೆ ಕಳುಹಿಸಿದ್ದಾರೆ.

ಘಟನೆ ಕುರಿತು ಬಿಜೆಪಿ ಕಾಂಗ್ರೆಸ್ ಸರಕಾರದ ವಿರುದ್ಧ ಸಮರ ಸಾರಿತ್ತು. ವ್ಯಾಪಕ ಆಕ್ರೋಶವೂ ವ್ಯಕ್ತವಾಗಿತ್ತು.”

Leave a Reply

Your email address will not be published. Required fields are marked *

error: Content is protected !!