February 2, 2026

ಜೋಕಾಲಿ ಆಡುತ್ತಿದ್ದ ಬಾಲಕ ಸಾವು

0
image_editor_output_image1693042464-1708935899051.jpg

ದಾವಣಗೆರೆ: ಜೋಕಾಲಿ ಆಡುತ್ತಿದ್ದ ಬಾಲಕನೊಬ್ಬ ದುರ್ಮರಣಕ್ಕೀಡಾದ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಗ್ರಾಮದಲ್ಲಿ ನಡೆದಿದೆ.

ಪಿ.ಜೆ ಕೊಟ್ರೇಶ್ (14) ಮೃತ ಬಾಲಕ. ಈತ ಖಾಸಗಿ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದನು. ಈತ ಶಾಲೆ ಮುಗಿಸಿ ಬಂದು ಮನೆಯಲ್ಲಿ ಜೋಕಾಲಿಯಲ್ಲಿ ಕುಳಿತು ಆಟವಾಡುತ್ತಿದ್ದನು.

ಹೀಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಜೋಕಾಲಿ ಹಗ್ಗವು ಆಕಸ್ಮಿಕವಾಗಿ ಕೊರಳಿಗೆ ಸುತ್ತಿಕೊಂಡಿದೆ. ಪರಣಾಮ ಹಗ್ಗ ಬಿಗಿಯಾಗಿ ಬಾಲಕನಿಗೆ ಉಸಿರಾಡಲು ಸಾಧ್ಯವಾಗದೇ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ

Leave a Reply

Your email address will not be published. Required fields are marked *

error: Content is protected !!