February 2, 2026

ಮಲ್ಪೆ: ಸ್ಕೂಟರ್ ಸಮೇತ ನೀರಿಗೆ ಬಿದ್ದ ವ್ಯಕ್ತಿಯ ರಕ್ಷಣೆ

0
image_editor_output_image1033592895-1708790101845.jpg

ಮಲ್ಪೆ: ಸ್ಕೂಟರ್ ಸಮೇತವಾಗಿ ನೀರಿಗೆ ಬಿದ್ದ ವ್ಯಕ್ತಿಯನ್ನು ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ಮೇಲೆತ್ತಿದ ಘಟನೆ ಮಲ್ಪೆ ಮೀನುಗಾರಿಕೆ ಬಂದರಿನ ಬಾಪುತೋಟ ಬಳಿಕ ದಕ್ಕೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

ಬೋಟು ಒಂದರ ಲೆಕ್ಕ ಸಹಾಯಕನಾಗಿ ಕೆಲಸ ಮಾಡುತ್ತಿರುವ ನಿಖಿಲ್ ಸುಮಾರು 8 ಗಂಟೆ ವೇಳೆಗೆ ತನ್ನ ಡಿಯೋ ಸ್ಕೂಟರಿನಲ್ಲಿ ದಕ್ಕೆ ಬಳಿ ನಿಲ್ಲಿಸಲಾಗಿದ್ದ ಬೋಟ್‌ನ ಸಮೀಪಕ್ಕೆ ಬಂದಿದ್ದು, ಈ ವೇಳೆ ನಿಯಂತ್ರಣ ತಪ್ಪಿ ಸ್ಕೂಟರ್ ಸಹಿತವಾಗಿ ನೀರಿಗೆ ಬಿದ್ದಿದ್ದರು. ತತ್‌ಕ್ಷಣ ಈಶ್ವರ್ ಮಲ್ಪೆ ಮತ್ತು ಸ್ಥಳೀಯರು ಸೇರಿ ನಿಖಿಲ್ ಅವರನ್ನು ನೀರಿನಿಂದ ಮೇಲೆತ್ತಿ ಪ್ರಾಣಾಪಾಯದಿಂದ ಪಾರು ಮಾಡಿದರು.

ಕೆಸರಿನಲ್ಲಿ ಹುದುಗಿ ಹೋಗಿದ್ದ ಸ್ಕೂಟರನ್ನು ಈಶ್ವರ್ ಮಲ್ಪೆ ಅವರು ನೀರಿಗೆ ಧುಮುಕಿ ಚಾಣಾಕ್ಷತನ ವಹಿಸಿ ಹಗ್ಗದ ನೆರವಿನಿಂದ ಮೇಲಕ್ಕೆ ತಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!