February 2, 2026

ಶಿವಮೊಗ್ಗದ ಹರ್ಷ  ಕೊಲೆ ಪ್ರಕರಣದ ಆರೋಪಿಗಳಿಂದ ಜೈಲಿನಲ್ಲಿ ಹೊಡೆದಾಟ: ಮಾರಾಕಾಸ್ತ್ರ, ನಗದು, ಮೊಬೈಲ್ ವಶಕ್ಕೆ

0
image_editor_output_image-1620950076-1708756062219.jpg

ಕಲಬುರಗಿ: ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದ ಆರೋಪಿಗಳು ಜೈಲಿನಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ.

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಶಿವಮೊಗ್ಗ ಹರ್ಷ ಕೊಲೆಯ ಪ್ರಕರಣದ ಆರೋಪಿಗಳು ಮತ್ತು ಇತರೆ ಆರೋಪಿಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಹೊಡೆದಾಟ ನಡೆದಿದೆ.

ಈ ಗಲಾಟೆಯಲ್ಲಿ ಎರಡು ಗುಂಪಿನ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನೆಯ ಬಳಿಕ ಡಿಸಿಪಿ ಕ್ರೈಂ ನೇತೃತ್ವದಲ್ಲಿ ಜೈಲಿನ ಮೇಲೆ ದಾಳಿ ನಡೆದಿದೆ. ದಾಳಿ ವೇಳೆ ಮಾರಾಕಾಸ್ತ್ರ 10 ಸಾವಿರ ನಗದು ಹಾಗೂ ಎರಡು ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!