February 3, 2026

224 ಶಾಸಕರುಗಳಿಗೂ ಉಡುಗೊರೆ ನೀಡಿದ ಸ್ಪೀಕರ್ ಯುಟಿ ಖಾದರ್

0
SK-200224-gift.jpg


 
ಬೆಂಗಳೂರು: ವಿಧಾನಸಭೆ ಅಧಿವೇಶನಕ್ಕೆ ಆಗಮಿಸಿದ 224 ಶಾಸಕರಿಗೂ ಸ್ಫೀಕರ್ ಯುಟಿ ಖಾದರ್ ಭರ್ಜರಿ ಗಿಫ್ಟ್ ನೀಡುವ ಜೊತೆಗೆ ಒಂದು ಸಂದೇಶ ಪತ್ರವನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಶಾಸಕರಿಗೆ ನೀಡಿದ ಈ ಗಿಫ್ಟ್ ನಲ್ಲಿ ಡೈರಿ, ಪೆನ್, ಥರ್ಮಲ್ ಸ್ಟೀಲ್ ವಾಟರ್ ಬಾಟಲ್, ವಿಸಿಟಿಂಗ್ ಕಾರ್ಡ್ ಹೋಲ್ಡರ್, ಕೀ ಚೈನ್ ಸೇರಿ ಒಟ್ಟು 1,000 ಕಿಟ್ ಗಳನ್ನು ಖರೀದಿ ಮಾಡಲಾಗಿದ್ದು, ಇದಕ್ಕೆ ಒಟ್ಟು 19 ಲಕ್ಷ ರೂ ವೆಚ್ಚವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಶಾಸಕರಿಗೆ ಗಿಫ್ಟ್ ನೊಂದಿಗೆ ಗಂಡ ಭೇರುಂಡ ಲಾಂಛನವನ್ನು ನೀಡಲಾಗಿದ್ದು, ಈ ಲಾಂಛನವನ್ನು ಶಾಸಕರು ತಮ್ಮ ಅಂಗಿ ಜೇಬಿಗೆ ಸಿಕ್ಕಿಸಿಕೊಂಡು ಸದನಕ್ಕೆ ಆಗಮಿಸುವ ಮೂಲಕ ಗಮನ ಸೆಳೆದರು.

ಇನ್ನು ಸ್ಪೀಕರ್ ಖಾದರ್ ಶಾಸಕರಿಗೆ ಗಿಫ್ಟ್ ನೀಡುವುದರ ಜೊತೆಗೆ ಸೌಹಾರ್ದದ ಸಂದೇಶವನ್ನು ನೀಡಿದ್ದಾರೆ. ಗಿಫ್ಟ್ ಬಾಕ್ಸ್ ನಲ್ಲಿ ಸರ್ಕಾರದ ಕೆಲಸ ದೇವರ ಕೆಲಸ ಎಂದು ಉಲ್ಲೇಖ ಮಾಡುವುದರ ಜೊತೆಗೆ, ಜಾತಿ, ಧರ್ಮ, ಪಕ್ಷದಲ್ಲಿರುವ ದ್ವೇಷವನ್ನು ಅಳಿಸೋಣ. ಸಮಾನತೆ, ಐಕ್ಯತೆ, ಸೌಹಾರ್ದತೆಯ ದೇಶವನ್ನು ಉಳಿಸೋಣ ಎಂದು ಬರೆಯಲಾಗಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!