ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಐವರು ಸ್ಥಳದಲ್ಲೇ ಸಾವು
ಜೈಪುರ: ರಾಜಸ್ಥಾನದ ಬಿಕೆನರ್ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ 18 ತಿಂಗಳ ಮಗು ಕೂಡ ಸಾವನ್ನಪ್ಪಿದೆ.
ಬಿಕೆನರ್ನ ಭರತ್ಮಲಾ ಹೈವೇನಲ್ಲಿ SUV ವಾಹನ ಮತ್ತು ಟ್ರಕ್ ನಡುವೆ ಅಪಘಾತ ಸಂಭವಿಸಿದೆ. ಮೃತ ನಾಲ್ವರು ಕೂಡ ವೈದ್ಯರಾಗಿದ್ದರು.
ಡಾಕ್ಟರ್ ಪ್ರತೀಕ್, ಇವರ ಪತ್ನಿ ಡಾಕ್ಟರ್ ಹೇಟಲ್, ಡಾಕ್ಟರ್ ಪೂಜಾ ಇವರ ಪತಿ ಡಾ. ಕರಣ್ ಮೃತ ದುರ್ದೈವಿಗಳು. ಪೂಜಾ ಮತ್ತು ಕರಣ್ ಅವರ ಒಂದೂವರೆ ವರ್ಷದ ಹೆಣ್ಣು ಮಗು ಕೂಡ ಸಾವನ್ನಪ್ಪಿದೆ.




