ಬಂಟ್ವಾಳ: 6 ತಿಂಗಳ ಗರ್ಭಿಣಿ ಆಸ್ಪತ್ರೆಯಲ್ಲಿ ಸಾವು
ಬಂಟ್ವಾಳ: ಮಗುವಿನ ನಿರೀಕ್ಷೆಯಲ್ಲಿದ್ದ 6 ತಿಂಗಳ ಗರ್ಭಿಣಿ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ಫೆಬ್ರವರಿ 14 ರಂದು ನಡೆದಿದೆ.
ಮೃತರನ್ನು ತೆಂಕಕಜೆಕಾರು ನಿವಾಸಿ ವಸಂತ ಅವರ ಪತ್ನಿ ಸುಜಾತಾ (40) ಎಂದು ಗುರುತಿಸಲಾಗಿದೆ. 6 ತಿಂಗಳ ಗರ್ಭಿಣಿಯಾಗಿರುವ ಅವರು ಗರ್ಭಸ್ಥ ಶಿಶುವಿಗೆ ಹೃದಯದ ಸಮಸ್ಯೆ ಹಿನ್ನಲೆ ಫೆಬ್ರವರಿ 12ರಂದು ಮಂಗಳೂರು ಲೇಡಿಗೋಶನ್ ಆಸ್ಪತ್ರೆಗೆ ದಾಖಲಾಗಿದ್ದರು.




