ರಾಜ್ಯ ಬಜೆಟ್-2024: ಪಶು ವೈದ್ಯ ಸಂಸ್ಥೆಗಳ ನೂತನ ಕಟ್ಟಡಕ್ಕೆ ₹100 ಕೋಟಿ ಅನುದಾನ
ಬೆಂಗಳೂರು: 2024-25ನೇ ಸಾಲಿನ ರಾಜ್ಯ ಬಜೆಟ್ ಗಾತ್ರ 3.8 ಲಕ್ಷ ಕೋಟಿ ರೂಪಾಯಿ ಆಗಿದ್ದು, ಈ ಬಾರಿಯೂ ವಲಯವಾರು ವಿಂಗಡಣೆ ಮಾಡಿ ಮುಖ್ಯಮಂತ್ರಿ ಸಿದ್ಜರಾಮಯ್ಯ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಬಿಎಂಟಿಸಿಗೆ 1,334 ಹೊಸ ಇವಿ ಬಸ್ ಖರೀದಿ, ಪಶು ವೈದ್ಯ ಸಂಸ್ಥೆಗಳ ನೂತನ ಕಟ್ಟಡಕ್ಕೆ ₹100 ಕೋಟಿ ಅನುದಾನ, ಪಶು ವೈದ್ಯ ಸಂಸ್ಥೆಗಳ ಹೊಸ ಕಟ್ಟಡಗಳಿಗೆ ಅನುದಾನ, ವಿಜಯಪುರ ಜಿಲ್ಲೆಯ ಆಲಮೇಲದಲ್ಲಿ ತೋಟಗಾರಿಕಾ ಕಾಲೇಜು ಸ್ಥಾಪನೆ, ಹೊಸದಾಗಿ 44 ಕಿ.ಮೀ ಮೆಟ್ರೊ ಮಾರ್ಗ ಸೇರ್ಪಡೆ, ಬೆಂಗಳೂರಿನ ನಮ್ಮ ಮೆಟ್ರೊಗೆ ಮತ್ತಷ್ಟು ವೇಗ ನೀಡಲಾಗಿದೆ ಎಂದರು.




