October 18, 2024

ತಾಯಿಫ್ ಫೈಟರ್ಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಫೆ.15ರಂದು “ತಾಯಿಫ್ ನೈಟ್ ಗೇಮ್ಸ್ ಫೆಸ್ಟಿವಲ್”

0

ತಾಯ್ನಾಡ ಹಸಿರಿನ ಉಸಿರೊಂದಿಗೆ ಸೌದಿ ಅರೇಬಿಯಾದ ಉರಿಬಿಸಿಲಲ್ಲಿ ದುಡಿಯುತ್ತಿರುವ ಅನಿವಾಸಿ ಭಾರತೀಯರ ಬಿಡುವಿನ ವೇಳೆಯನ್ನು ಒಂದಾಗಿ ಕಲೆತು, ಬೆರೆತು, ಆಟವಾಡಿ ಸಂತಸ ಹಂಚಿಕೊಳ್ಳುವ ಹಾಗೂ ತಾಯ್ನಾಡಿನ ಸಾಮಾಜಿಕ ಸೇವೆಯ ಉದ್ದೇಶದಿಂದ ಸ್ಥಾಪಿತವಾದ ತಾಯಿಫ್ ಫೈಟರ್ಸ್ ಸ್ಪೋರ್ಟ್ಸ್ ಕ್ಲಬ್ ತಾಯಿಫ್, ಸೌದಿ ಅರೇಬಿಯಾ ಇದರ ದಶವಾರ್ಷಿಕ ಸಂಭ್ರಮದ ಪರ್ವದಲ್ಲಿ ನಾವಿದ್ದೇವೆ.

ದಶ ವಾರ್ಷಿಕವನ್ನು ವಿಜೃಂಭಣೆಯಿಂದ ಆಚರಿಸುವ ಅಂಗವಾಗಿ ತಾಯಿಫ್ ನೈಟ್ 2024 ಗೇಮ್ಸ್ ಫೆಸ್ಟಿವಲ್ ಇಂದು ರಾತ್ರಿ 8-00 ಗಂಟೆಗೆ ತಾಯಿಫ್ ನ ಹಲಗ ಎಂಬಲ್ಲಿ ನಡೆಯಲಿದೆ. ಇನ್ ಶಾಅಲ್ಲಾಹ್.
ಕ್ರಿಕೆಟ್ (ಅದಾಗಲೇ ನಡೆದಿರುತ್ತದೆ), ಕಬಡ್ಡಿ, ವಾಲಿಬಾಲ್, ಹಗ್ಗಜಗ್ಗಾಟ ಮುಂತಾದ ಹತ್ತರಷ್ಟು ವೈವಿಧ್ಯಮಯ ಪಂದ್ಯಾಟ ನಡೆಯಲಿದೆ.

ಘಟಾನುಘಟಿ ಸ್ಪರ್ಧಾಳುಗಳು ಮತ್ತು ಕ್ರೀಡಾಪಟುಗಳಿಂದ ಮನರಂಜಿಸುವ ಪ್ರದರ್ಶನಗಳ ರಸದೌತಣವನ್ನು ಸವಿಯಲು ತಮಗೆಲ್ಲರಿಗೂ ಆತ್ಮೀಯ ಆಮಂತ್ರಣ, ಸ್ವಾಗತ, ಸುಸ್ವಾಗತ!!
‌ ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಮಹಿಳೆ, ಮಕ್ಕಳು ಕೂಡಾ ಈ ಪರ್ವದಲ್ಲಿ ಭಾಗವಹಿಸಿ ಫೆಸ್ಟಿವಲ್ ನ ರಸಮಯ ಕ್ಷಣಗಳನ್ನು ಆಸ್ವದಿಸಬೇಕೆಂಬ ಉದ್ದೇಶದಿಂದ ಫ್ಯಾಮಿಲಿಗೂ ವಿಶೇಷ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.
ಎಲ್ಲರೂ ಬನ್ನಿ. ಆಡಿ, ನೋಡಿ, ಕೂಡಿ ಸಂತಸದ ಕ್ಷಣಗಳನ್ನು ಸವಿಯೋಣ.

ವರದಿ: ದಾವೂದ್ (ತಾಯಿಫ್)ಗುರುಪುರ

Leave a Reply

Your email address will not be published. Required fields are marked *

error: Content is protected !!