February 2, 2026

ವಿಟ್ಲ ಪಟ್ಟಣ ಪಂಚಾಯತ್ ಗೆ ಮೂವರು ನಾಮನಿರ್ದೇಶಕ ಸದಸ್ಯರ ನೇಮಕ

0
image_editor_output_image1807286712-1707554272619.jpg

ವಿಟ್ಲ: ಪಟ್ಟಣ ಪಂಚಾಯಿತಿಯ ನೂತನ ನಾಮನಿರ್ದೇಶಕ ಸದಸ್ಯರಾಗಿ ಮೊಹಮ್ಮದ್ ಇಕ್ಬಾಲ್, ಶ್ರೀನಿವಾಸ್ ಶೆಟ್ಟಿ ಕೊಲ್ಯ, ಸುನಿತಾ ಕೋಟ್ಯಾನ್ ರವರನ್ನು ನೇಮಿಸಿ ಆದೇಶಿಸಿದೆ.

ಮಾಜಿ ಶಾಸಕಿ ಟಿ ಶಕುಂತಲಾ ಶೆಟ್ಟಿ ಹಾಗೂ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ.ರಾಜಾರಾಮ್ ಕೆ.ಬಿ, ಮಾಜಿ ಬ್ಲಾಕ್ ಅಧ್ಯಕ್ಷರುಗಳಾದ ಪ್ರವೀಣ್ ಚಂದ್ರ ಆಳ್ವ, ಮುರಳೀಧರ ರೈ ಮಠಂಡಬೆಟ್ಟು, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್ ಮೊಹಮ್ಮದ್, ವಿಟ್ಲ ನಗರ ಕಾಂಗ್ರೆಸ್ ವಕ್ತಾರ ವಿ.ಕೆ.ಎಂ ಅಶ್ರಫ್ ರವರುಗಳ ಶಿಫಾರಸ್ಸಿನಂತೆ ಮಾನ್ಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಅವರು ನೇಮಿಸಿ ಆದೇಷಿಸಿದ್ದಾರೆ.

ಮೊಹಮ್ಮದ್ ಇಕ್ಬಾಲ್ ಇವರು ವಿಟ್ಲದ ಪ್ರತಿಷ್ಠಿತ ಉದ್ಯಮ ಕುಟುಂಬ ಸದಸ್ಯರಾಗಿದ್ದಾರೆ. ವಿಟ್ಲ ಲಯನ್ಸ್ ಕ್ಲಬ್ ಸದಸ್ಯರಾಗಿ, ಮಾಜಿ ಅಧ್ಯಕ್ಷರಾಗಿ, ವಿಟ್ಲ ವರ್ತಕ ಸಂಘದ ಕಾರ್ಯದರ್ಶಿಯಾಗಿ, ವಿಟ್ಲ ಹೊರೈಝನ್ ಪಬ್ಲಿಕ್ ಸ್ಕೂಲ್ ನ ಅಧ್ಯಕ್ಷ, ಉಪಾಧ್ಯಕ್ಷ, ಸಂಚಾಲಾಕರಾಗಿ ವಿವಿಧ ಕ್ಷೇತ್ರಗಳಲ್ಲಿ ಹಲವಾರು ಸಂಘ ಸಂಸ್ಥೆಗಳಲ್ಲಿ ದುಡಿದು, ಸಾಮಾಜಿಕ, ರಾಜಕೀಯ, ಧಾರ್ಮಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಚಾಪನ್ನು ಮೂಡಿಸಿದ್ದಾರೆ. ವಿದ್ಯಾರ್ಥಿ ನಾಯಕನಾಗಿ, ಯುವ ನಾಯಕನಾಗಿ ಅತೀ ಸಣ್ಣ ವಯಸ್ಸಿನಲ್ಲೇ ವಿಟ್ಲ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶ್ರೀನಿವಾಸ್ ಶೆಟ್ಟಿ ಕೊಲ್ಯ ಇವರು ವಿಟ್ಲದ ಉದ್ಯಮಿಯಾಗಿ, ವಿಟ್ಲ ಗ್ರಾಮ ಪಂಚಾಯಿತಿಗೆ ಮೂರು ಬಾರಿ ಸದಸ್ಯರಾಗಿ, ವಿಟ್ಲ ನಗರ ಕಾಂಗ್ರೆಸ್ ಸದಸ್ಯರಾಗಿ, ರಂಗಭೂಮಿ ಕಲಾವಿದ, ನಾಟಕ ನಿರ್ದೇಶಕ, ಚಲನಚಿತ್ರ ನಟರಾಗಿವು ಸಂಸ್ಕೃತಿಕ ಸೇವೆಯನ್ನು ನೀಡುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದಾರೆ.

ಸುನಿತಾ ಕೋಟ್ಯಾನ್ ಇವರು ಮಹಿಳಾ ಕಾಂಗ್ರೆಸ್ ನಾಯಕಿಯಾಗಿ, ವಿಟ್ಲ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾಗಿ, ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!