February 2, 2026

ಉಡುಪಿ: ಕಾರಿಗೆ ಟಿಪ್ಪರ್ ಢಿಕ್ಕಿ: ಚಾಲಕನಿಗೆ ಗಂಭೀರ ಗಾಯ

0
IMG-20240207-WA0001.jpg

ಉಡುಪಿ: ಕಾರಿಗೆ ಟಿಪ್ಪರ್ ಢಿಕ್ಕಿಯಾದ ಪರಿಣಾಮ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೋಟ, ಬನ್ನಾಡಿ ಬಳಿ ಉಪ್ಲಾಡಿಯಲ್ಲಿ ಮಂಗಳವಾರ ನಡೆದಿದೆ.

ಕಾರು ಚಾಲಕ ಗಣೇಶ್ ಶೆಟ್ಟಿ (39) ಗಂಭೀರ ಗಾಯಗೊಂಡಿದ್ದು, ಅವರು ಕೋಟದ ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಗಣೇಶ್ ಶೆಟ್ಟಿ ಅವರು ಕಾರಿನಲ್ಲಿ ಕೋಟ ಮೂರ್ಕೈಯಿಂದ ಮಧುವನ ಕಡೆ ಸಂಚರಿಸುತ್ತಿದ್ದ ವೇಳೆ ಬನ್ನಾಡಿಯಿಂದ ಕೋಟ ಕಡೆ ಬರುತ್ತಿದ್ದ ಟಿಪ್ಪರ್ ವಿರುದ್ಧ ದಿಕ್ಕಿನಲ್ಲಿ ಬಂದು ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರು ಚಾಲಕನಿಗೆ ಗಂಭೀರ ಗಾಯವಾಗಿದೆ.

ಕೂಡಲೇ ಅವರನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!