March 26, 2026

ವಿಟ್ಲ: ಚೋಯ್ಸ್ ಗೋಲ್ಡ್ 7ನೇ ವರ್ಷಾಚರಣೆ ಮತ್ತು ಬ್ರೈಡಲ್ ಫೆಸ್ಟ್ 2023: ವರ್ಷಾಚರಣೆ ಪ್ರಯುಕ್ತ ಗ್ರಾಹಕರಿಗೆ ಹಲವು ಆಫರ್

0
image_editor_output_image-205318505-1703523775944

ವಿಟ್ಲ: ವಿಟ್ಲದ ಶಾಲಾ ರಸ್ತೆಯ ಮೋತಿ ಸಿಟಿ ಕಟ್ಟಡದಲ್ಲಿ ಕಳೆದ ಆರು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಚೋಯ್ಸ್ ಗೋಲ್ಡ್ 7ನೇ ವರ್ಷಾಚರಣೆ ಮತ್ತು ಬ್ರೈಡಲ್ ಫೆಸ್ಟ್ 2023 ಕಾರ್ಯಕ್ರಮ ನಡೆಯಿತು. ಸಯ್ಯದ್ ಆಹಮ್ಮದ್ ಶಿಯಾಬುದ್ದೀನ್ ತಂಙಳ್ ತಲೆಕ್ಕಿ ದುವಾಃ ಮೂಲಕ ಚಾಲನೆ ನೀಡಿದರು.

ಚೋಯ್ಸ್ ಗೋಲ್ಡ್ ನ ಆಡಳಿತ ನಿರ್ದೇಶಕರಾದ ಅಶ್ರಪ್ ನಾಡಾಜೆ ಮತ್ತು ಶಾಹೀರ್ ಬಡೂರು ಅತಿಥಿಗಳನ್ನು ಸ್ವಾಗತಿಸಿ, ಸಂಸ್ಥೆ ನಡೆದು ಬಂದ ಹಾದಿಯನ್ನು ವಿವರಿಸಿದರು.

7ನೇ ವರ್ಷಾಚರಣೆ ಪ್ರಯುಕ್ತ 3 ಪವನ್ ಗಿಂತ ಮೇಲಿನ ಚಿನ್ನ ಖರೀದಿಗೆ ವಿಶೇಷ ಉಡುಗೊರೆ, ಮದುವೆ ಖರೀದಿಗೆ ವಿಶೇಷ ರಿಯಾಯಿತಿ, ಬಂಪರ್ ಬಹುಮಾನವಾಗಿ ಎಲ್ಲಾ ಖರೀದಿಯ ಮೇಲೆ ಬಂಪರ್ ಡ್ರಾ ಕೂಪನ್ ನೀಡಲಾಗಿದೆ.

ವಿಟ್ಲ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್, ನಿಕಟ ಪೂರ್ವ ಅಧ್ಯಕ್ಷ ಶೀತಲ್ ಇಕ್ಬಾಲ್, ಬಂಟ್ವಾಳ ಜಂ- ಇಯತುಲ್ ಫಲಾಹ್ ಅಧ್ಯಕ್ಷ ರಶೀದ್  ವಿಟ್ಲ, ಅಬೂಬಕರ್ ಅನಿಲಕಟ್ಟೆ, ಖಲಂದರ್ ಪರ್ತಿಪ್ಪಾಡಿ, ಶಾಕಿರ್ ಅಳಕೆಮಜಲು, ವಿ.ಕೆ.ಎಂ.ಅಶ್ರಫ್, ಉಬೈದ್ ವಿಟ್ಲ ಬಝಾರ್, ಅದ್ರಾಮ ಕುರುಂಬಳ  ಮೊದಲಾದವರು ಭಾಗವಹಿಸಿ ಶುಭ ಹಾರೈಸಿದರು. ಚೋಯ್ಸ್ ಗೋಲ್ಡ್ ನ ಶಾಖಾ ವ್ಯವಸ್ಥಾಪಕ ಎನ್ ಕೆ ಜಲೀಲ್ ಅಳಿಕೆ, ಮತ್ತು ಸಿಬ್ಬಂದಿಗಳು ಇದ್ದರು

Leave a Reply

Your email address will not be published. Required fields are marked *

error: Content is protected !!