February 3, 2026

ಮಂಗಳೂರು: ದ್ವಿಚಕ್ರ, ಅಂಗಡಿ ಮುಂಗಟ್ಟುಗಳಲ್ಲಿ ಸರಣಿ ಕಳ್ಳತನ: ಇಬ್ಬರು ಆರೋಪಿಗಳ ಬಂಧನ

0
image_editor_output_image-4288221-1702965288909.jpg

ಮಂಗಳೂರು: ದ್ವಿಚಕ್ರ ವಾಹನ ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಸರಣಿ ಕಳ್ಳತನ ಮಾಡಿದ ಪ್ರಕರಣದ ಇಬ್ಬರು ಆರೋಪಿಗಳನ್ನು ಮಂಗಳೂರಿನ ಬಂದರು ಠಾಣೆಯ ಪೊಲೀಸರು ಬಂಧಿಸಿ ಎರಡು ದ್ವಿಚಕ್ರ ವಾಹನ ಮತ್ತು ಎರಡು ಲ್ಯಾಪ್ ಟೊಪ್‌ ಸೇರಿದಂತೆ ಒಟ್ಟು ಸುಮಾರು 1 ಲಕ್ಷದ 20 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಮಂಗಳೂರಿನ ಕಸ್ಬಾ ಬೆಂಗ್ರೆಯ ನಿವಾಸಿಗಳಾದ ಮೊಹಮ್ಮದ್‌ ಆಸಿಫ್‌ ಯಾನೆ ಆಸಿಫ್‌ ಯಾನೆ ಆಚಿ (32) ಮತ್ತು ಮಹಮ್ಮದ್‌ ಸಫ್ವಾನ್‌ (21) ಬಂಧಿತರು.

ಮಹಮ್ಮದ್ ಸಿನಾನ್ ಎಂಬವರು ಡಿ.1 ರಂದು ಮಂಗಳೂರು ಉತ್ತರ ದಕ್ಕೆಯ ಬಳಿ ಪಾರ್ಕಿಂಗ್ ಮಾಡಿದ್ದ ಆಕ್ಟಿವಾ ಸ್ಕೂಟರ್ ಕಳವಾದ ಬಗ್ಗೆ ಬಂದರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾಗ ಈ ಇಬ್ಬರು ಆರೋಪಿಗಳು ಪತ್ತೆಯಾಗಿದ್ದಾರೆ.

ಆರೋಪಿಗಳಿಂದ ಪಡುಬಿದ್ರೆ ನಗರ ಗ್ರಾಮ ಸೇವಾ ಕೇಂದ್ರದಿಂದ ಕಳವು ಮಾಡಿದ 2 ಲ್ಯಾಪ್ ಟಾಪ್ ಹಾಗೂ ಮಂಗಳೂರು ಉತ್ತರ ದಕ್ಕೆಯ ಪಾರ್ಕಿಂಗ್ ಸ್ಥಳದಿಂದ ಕಳವು ಮಾಡಿದ ಆಕ್ಟಿವಾ ಸ್ಕೂಟರ್ ಮತ್ತು ಮಂಕಿ ಸ್ಯ್ಟಾಂಡ್ ಬಳಿಯಿಂದ ಕಳವು ಮಾಡಿದ ಡಿಯೋ ಸ್ಕೂಟರ್ ವಶಪಡಿಸಿಕೊಳ್ಳಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!