May 9, 2026

ಮಂಗಳೂರು: ವಿವಾಹಿತ ಮಹಿಳೆ ತನ್ನ ಮೂರು ವರ್ಷದ ಪುತ್ರನ ಜತೆ ನಾಪತ್ತೆ:

0
image_editor_output_image-297451101-1702638065033

ಮಂಗಳೂರು: ಪತ್ನಿ ಹಾಗೂ ಮೂರು ವರ್ಷದ ಪುತ್ರ ನಾಪತ್ತೆಯಾಗಿರುವ ಬಗ್ಗೆ ಬಜಪೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಬಜ್ಪೆಯ ಕೆ.ಪಿ. ನಗರದ ಶಾಹಿಸ್ತಾ ಮಂಝಿಲ್‌ನ ಅಹ್ಮದ್‌ ಮಕ್ಸೂದ್‌ ಅವರ ಪತ್ನಿ ಶರಿನಾ (24) ಮತ್ತು ಮಗ ಮಹಮದ್‌ ತೋಹಾರ್‌ (3) ಡಿ.11ರಂದು ರಾತ್ರಿ ಕಾಣೆಯಾದ ಬಗ್ಗೆ ದೂರು ದಾಖಲಾಗಿದೆ.

ಅಹ್ಮದ್‌ ಮಕ್ಸೂದ್‌ ಅವರು ತಾಯಿ ಮತ್ತು ಪತ್ನಿಯೊಂದಿಗೆ ವಾಸವಾಗಿದ್ದು ಸುಮಾರು 6 ವರ್ಷಗಳ ಹಿಂದೆ ಸುಳ್ಯದ ಶರಿನಾ (24) ಅವರನ್ನು ವಿವಾಹವಾಗಿದ್ದು ಈ ದಂಪತಿಗಳಿಗೆ 3 ವರ್ಷದ ಗಂಡು ಮಗುವಿದೆ. ಶರಿನಾ 5 ತಿಂಗಳ ಗರ್ಭಿಣಿಯಾಗಿದ್ದು ದಂಪತಿ ಅನ್ಯೋನ್ಯವಾಗಿದ್ದರು. ಡಿ. 11ರಂದು ರಾತ್ರಿ ಎಲ್ಲರೂ ಮಲಗಿದ್ದಾಗ ಮಧ್ಯರಾತ್ರಿ 2.45ರ ಸುಮಾರಿಗೆ ಶರಿನಾ ಪುತ್ರನೊಂದಿಗೆ ಮನೆ ಬಿಟ್ಟು ಹೋಗಿದ್ದರು. ಮರುದಿನ ಬೆಳಗ್ಗೆ ಮನೆಯ ಎದುರಿನ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಇದು ದೃಢಪಟ್ಟಿದೆ. ಶರಿನಾ ಬಟ್ಟೆಬರೆ ಹಾಗೂ 5 ಗ್ರಾಂ ಚಿನ್ನದ ಆಭರಣ ತೆಗೆದುಕೊಂಡು ಹೋಗಿದ್ದು, ಅದಕ್ಕೂ ಮೊದಲು ತಾಯಿ ಮನೆಗೆ ಹೋಗುತ್ತಿರುವುದಾಗಿ ಬ್ಯಾರಿ ಭಾಷೆಯಲ್ಲಿ ಚೀಟಿ ಬರೆದಿಟ್ಟಿದ್ದಾರೆ. ಆದರೆ ಅವರ ತಾಯಿಗೆ ಫೋನ್‌ ಮಾಡಿ ವಿಚಾರಿಸಿದಾಗ ಅಲ್ಲಿಗೆ ಹೋಗಿಲ್ಲ ಎನ್ನುವುದು ದೃಡಪಟ್ಟಿದೆ. ನೆರೆಕರೆ, ನೆಂಟರ ಮನೆಯಲ್ಲಿ ಹುಡುಕಾಡಿದ್ದು ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅಹ್ಮದ್‌ ಮಕ್ಸೂದ್‌ ಡಿ. 13ರಂದು ಬಜ್ಪೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!